ನವರಾತ್ರಿ ಅಂಗವಾಗಿ ಬದಿಯಡ್ಕದಲ್ಲಿ ವಿಶೇಷ ಸಿಂಹ ವೇಷಕ್ಕೆ ಚಾಲನೆ

0
9

ಬದಿಯಡ್ಕ: ನವರಾತ್ರಿ ಹಬ್ಬದ ಅಂಗವಾಗಿ ಜನಪದ ಕಲಾವಿದ ವಸಂತ ಬಾರಡ್ಕ ಅವರ ನೇತೃತ್ವದಲ್ಲಿ ವಿಶೇಷ ಸಿಂಹ ವೇಷ ಕಾರ್ಯಕ್ರಮವು ಬದಿಯಡ್ಕ ತುಳು ಭವನದಿಂದ ಸಂಭ್ರಮದಿಂದ ಹೊರಟಿತು.
ಕರಾವಳಿ ಭಾಗದ ಜನಪದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಿಂಹ ವೇಷವು ನವರಾತ್ರಿ ಆಚರಣೆಯ ವಿಶೇಷ ಆಕರ್ಷಣೆಯಾಗಿದೆ. ಸಿಂಹ ವೇಷ ಧರಿಸಿ ತಾಸೆಯ ತಾಳಕ್ಕೆ ಹೆಜ್ಜೆ ಹಾಕುತ್ತಾ ಜನರ ನಡುವೆ ತೆರಳಿ ಸಂಭ್ರಮ ಮೂಡಿಸುವ ಈ ಕಲೆಯು ಜನಪದ ಸಂಸ್ಕೃತಿಯ ವೈಶಿಷ್ಟ್ಯವನ್ನು ಸಾರುತ್ತದೆ. ಇಂತಹ ಕಲಾ ಪ್ರದರ್ಶನಗಳು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಧಾರ್ಮಿಕ ಮುಖಂಡ ಯಕ್ಷಗಾನ ಅರ್ಥಧಾರಿಗಳು ಲಕ್ಷ್ಮಣ ಪ್ರಭು ಕರಿಂಬಿಲ ಅವರು ತಾಸೆ ಬಾರಿಸುವ ಮೂಲಕ ಚಾಲನೆ ನೀಡಿ ಹೇಳಿದರು.

. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಈಶ್ವರ ಮಾಸ್ಟರ್ ಪೆರುಮುಖ, ಉದಯ ಕುಮಾರ್ ರ್ಆರ್ಥಿಪಳ್ಳ, ಅನಂತ ಕುಮಾರ್ ಬರ್ಲ, ಹರೀಶ್ ಗೋಸಾಡ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನವರಾತ್ರಿ ಹಬ್ಬದ ಸಾಂಸ್ಕೃತಿಕ ಸಂಭ್ರಮಕ್ಕೆ ಮೆರುಗು ನೀಡಿದ ಈ ವಿಶೇಷ ಸಿಂಹ ವೇಷ ಕಾರ್ಯಕ್ರಮವು ಸ್ಥಳೀಯ ಜನರಲ್ಲಿ ಜನಪದ ಕಲೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಗಡಿನಾಡಿನ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಸಾರಿತು.