ಪುಣೆಯಲ್ಲಿ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳ ದುರಂತ ಅಂತ್ಯ!

0
19

ಮಂಗಳೂರು ಮೂಲದ ರವಿ ಮೂಲ್ಯ ಅವರ ಮಕ್ಕಳ ನಿಧನಕ್ಕೆ ಕಂಬನಿ ಮಿಡಿದ ಕುಟುಂಬಸ್ಥರು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋಸರಿ ಪ್ರದೇಶದಲ್ಲಿ ನೆಲೆಸಿದ್ದ ಮಂಗಳೂರು ಮೂಲದ ರವಿ ಮೂಲ್ಯ ಅವರ ಇಬ್ಬರು ಮಕ್ಕಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ.

ಮೃತರನ್ನು ಕೌಶಿಕ್ ಮೂಲ್ಯ (23) ಹಾಗೂ ಋಷಿಕಾ ಮೂಲ್ಯ (17) ಎಂದು ಗುರುತಿಸಲಾಗಿದೆ. ಯುವ ವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ.

ಮಕ್ಕಳ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಪೋಷಕರಿಗೆ ಈ ದುರಂತ ಆಘಾತವನ್ನುಂಟುಮಾಡಿದೆ. ಇಬ್ಬರು ಮಕ್ಕಳ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಪರಿಚಿತರು ದುಃಖದಲ್ಲಿ ಮುಳುಗಿದ್ದಾರೆ.

ಮೃತರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಹಾರೈಸೋಣ.