ಇದೇ ಜೂನ್ 8, ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 4.00 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು ಮಂಚಿತವಾಗಿ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 2414412)
ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ ಕಾರ್ಯಕ್ರಮಗಳಿರುತ್ತದೆ. ಆಂಧ್ರಪ್ರದೇಶದ ಕಡಪ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಅನುಪಮಾನಂದಜಿಯವರು “ವಚನವೇದವ್ಯಾಸ” ಎಂಬ ವಿಷಯವಾಗಿ, ಮತ್ತು ಮದುರೈ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯದೀಪಾನಂದಜಿಯವರು “ಅeಟಿಣಡಿಚಿಟ iಜeಚಿ oಜಿ ಉiಣಚಿ – ಇಟಿಟighಣeಟಿmeಟಿಣ ಣhಡಿough ಚಿಛಿಣioಟಿ” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ತದನಂತರ ಮಂಗಳೂರು ರಾಮಕ್ರೃಷ್ಣ ಮಠದ ಸ್ವಾಮಿ ಯುಗೇಶಾನಂದಜಿಯವರು “ಶ್ರೀರಾಮಕೃಷ್ಣರ ಭಕ್ತರೆ ಶ್ರೇಷ್ಠ ಭಕ್ತರು” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಅಪರಾಹ್ನ 1.00ಕ್ಕೆ ಶ್ರೀ ವಾಸುದೆವ ರಂಗ ಭಟ್ ಮತ್ತು ಇತರ ಕಲಾವಿದÀರಿಂದ “ಧರ್ಮಕ್ಶೇತ್ರೆ ಕುರುಕ್ಷೇತ್ರೆ” ಎಂಬ ವಿಷಯದÀ ಕುರಿತು ತಾಳಮದ್ದಳೆ-ಸಂವಾದ ಕಾರ್ಯಕ್ರಮಗಳು ನಡೆಯಲಿದೆ.
ಆಸಕ್ತರೆಲ್ಲರಿಗೂ ಆದರದ ಆಹ್ವಾನವಿರುತ್ತದೆ.