ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

0
13

ಇದೇ ಆಗಸ್ಟ್ 16, ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 4.00 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು ಮಂಚಿತವಾಗಿ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 2414412)

ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ ಕಾರ್ಯಕ್ರಮಗಳಿರುತ್ತದೆ. ಚೆನ್ನೈ ರಾಮಕೃಷ್ಣ ಮಠದ ಪ್ರಬಂಧಕರಾಗಿರುವ ಸ್ವಾಮಿ ರಘುನಾಯಕನಂದಜಿ ಯವರು “”The Supreme Adoration of God”” ಎಂಬ ವಿಷಯವಾಗಿ, ಮತ್ತು ಕಡಪ ರಾಮಕೃಷ್ಣ ಮಿಷನ್ ಮುಖ್ಯಸ್ಥರಾಗಿರುವ ಸ್ವಾಮಿ ಅನುಪಮಾನಂದಜಿ ಯವರು “ಆತ್ಮನೋ ಮೋಕ್ಷಾರ್ಥಮ್ ಜಗದ್ಹಿತಾಯ ಚ” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ತದನಂತರ ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಯವರು “ಮನಶ್ಶಾಂತಿಗಾಗಿ ಅಧ್ಯಾತ್ಮ” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಅಪರಾಹ್ನ 1.30ಕ್ಕೆ ವಿದುಷಿ ದೀಕ್ಷಾ ರಾಮಕೃಷ್ಣ ಬೆಂಗಳೂರು ಮತ್ತು ತಂಡದಿಂದ “ನಾದಾರ್ಪಣ” ಸಂಗೀತ ಕಾರ್ಯಕ್ರಮ ನಡೆಯಲಿದೆ.

ಆಸಕ್ತರೆಲ್ಲರಿಗೂ ಆದರದ ಆಹ್ವಾನವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here