ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಪದವಿಪೂರ್ವ ವಿದ್ಯಾಲಯ ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ವಿವೇಕಾನಂದ ಕಾಲೇಜಿನ ಆವರಣದಲ್ಲಿರುವ ಕೇಶವ ಸಂಕಲ್ಪದಲ್ಲಿ ನಡೆಯಿತು. ಉದ್ಘಾಟನೆ ನೆರವೇರಿಸಿದ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ ಕೆ. ಅವರು ಮಾತನಾಡುತ್ತಾ,ಮನುಷ್ಯನ ಸಮಗ್ರ ಬೆಳವಣಿಗೆಗೆ ಕ್ರೀಡೆ ಮುಖ್ಯ. ಕ್ರೀಡೆ ಎಂದರೆ ಕೇವಲ ಗೆಲುವು ,ಸೋಲಿನ ಸ್ಪರ್ಧೆ ಅಲ್ಲ. ಅದು ಕ್ರೀಡಾ ಸ್ಪೂರ್ತಿ ,ಶಿಸ್ತು ,ಆತ್ಮವಿಶ್ವಾಸ ,ಸಹಕಾರ ಮತ್ತು ನಾಯಕತ್ವವನ್ನು ಬೆಳೆಸುವ ಜೀವನದ ಪಾಠವಾಗಿದೆ. ಪ್ರತಿಯೊಬ್ಬರು ವಿಜೇತರಾಗದಿರಬಹುದು ಆದರೆ ಪ್ರಾಮಾಣಿಕವಾಗಿ ಭಾಗವಹಿಸುವ ಪ್ರತಿಯೊಬ್ಬರು ಅನುಭವ ಮತ್ತು ಆತ್ಮವಿಶ್ವಾಸವನ್ನು ಗಳಿಸುತ್ತಾರೆ. ಕಠಿಣ ಪರಿಶ್ರಮ ,ಅಭ್ಯಾಸ ಮತ್ತು ದೃಢ ಸಂಕಲ್ಪದಿAದ ಯಾವುದೇ ಗುರಿಯನ್ನು ಸಾಧಿಸಬಹುದು. ಸ್ಪರ್ಧಾರ್ಥಿಗಳು ಗೆಲುವನ್ನು ವಿನಯದಿಂದ ಹಾಗೂ ಸೋಲನ್ನು ಪಾಠವಾಗಿ ಸ್ವೀಕರಿಸಿ ಮುಂದೆ ಸಾಗಬೇಕು ಎಂದು ನುಡಿದರು.
ಕ್ರೀಡಾಕೂಟದಲ್ಲಿ 60ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿAದ ಸುಮಾರು 700 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಖೇಲ್ ಕೂಟ್ ಪ್ರಮುಖರಾದ ಕರುಣಾಕರ, ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್. ಉಪಸ್ಥಿತರಿದ್ದರು. ಉಪನ್ಯಾಸಕಿ ದಯಾಮಣಿ ಟಿ.ಕೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

