ಶ್ರೀ ಕ್ರಿಕೆಟರ್ ಅಲೆತ್ತೂರು ಬಿಸಿ ರೋಡ್ ಇದರ ದಶಮಾನೋತ್ಸವ

0
171

ಶ್ರೀ ಕ್ರಿಕೆಟರ್ ಅಲೆತ್ತೂರು ಬಿಸಿ ರೋಡ್ ಇದರ ದಶಮಾನೋತ್ಸವದ ಅಂಗವಾಗಿ ಎಸ್ ವಿಎಸ್ ಶಾಲಾ ಮೈದಾನ ಬಂಟ್ವಾಳ ಇಲ್ಲಿ ಬ್ರಾಹ್ಮಣ ಬಂಧುಗಳಿಗಾಗಿ ಅಲೆತ್ತೂರು ಪ್ರೀಮಿಯರ್ ಲೀಗ್ 2025 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಮರೋಪ ಸಮಾರಂಭ ಸಂಘದ ಅಧ್ಯಕ್ಷ ನರಸಿಂಹಮಯ್ಯ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ವೇದಮೂರ್ತಿ ಪ್ರಭಾಕರ ಭಟ್ ಮಂಡಾಡಿ, ಪಾಕಶಾಸ್ತ್ರಜ್ಞ ಅಲೆತೂರು ಲಕ್ಷ್ಮೀನಾರಾಯಣ ಮೈಯ್ಯ, ಸಮಾಜಸೇವಕ ಪ್ರಗತಿ ವರ ಕೃಷಿಕ ದೇವಸ್ಯ ರಾಮಕೃಷ್ಣ ಮೈಯ್ಯ, ಬ್ರಹ್ಮವಾಹಕ ಬಾರೆ ಕೃಷ್ಣ ಹೊಳ್ಳ, ಇವರುಗಳನ್ನು ಸನ್ಮಾನಿಸಲಾಯಿತು.

ಅಧ್ಯಾಪಕ ರಮಾನಂದ ಬಟ್ ನುಜಿ ಪಾಡಿ ಹತ್ತು ವರ್ಷಗಳ ಹಿಂದೆ ಸಣ್ಣ ರೀತಿಯಲ್ಲಿ ಜರಗುತ್ತಿದ್ದ. ಈ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿ ಸಂಸ್ಥೆ ರಾಜಕೀಯವಾಗಿ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ದೇವರ ದಯೆಯಿಂದ ಎಲ್ಲರ ಸಹಕಾರದೊಂದಿಗೆ ಮಾದರಿ ಸಂಸ್ಥೆಯಾಗಿ ಬೆಳೆಯುವಂತಾಗಲಿ ಎಂದರು. ರವಿಶಂಕರಮಯ್ಯ ಸಂಸ್ಥೆಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸೂರ್ಯನಾರಾಯಣ ರಾವ್ ಮಾತನಾಡಿ ಬ್ರಾಹ್ಮಣ್ಯದ ಈ ಸಂಘಟನೆ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂಬುದಾಗಿ ಶುಭ ಹಾರೈಸಿದರು ಶ್ರೀಕಾಂತ್ ಭಟ್ ಕೆದ್ಲಾ, ದೇವರಾಜಮಯ್ಯ, ಅನುಪರಾಜು, ಗಣೇಶ್ ಹೊಳ್ಳ, ಶರತ್ ಮಯ್ಯ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here