Saturday, June 14, 2025
HomeUncategorizedರೋಟರಿ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ, ಶ್ರಮಿಸಿ ಸಂಸ್ಥೆಯನ್ನು ಬಲಪಡಿಸಿ -ರೋ. ವಿಕ್ರಮ್ ದತ್ತ

ರೋಟರಿ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ, ಶ್ರಮಿಸಿ ಸಂಸ್ಥೆಯನ್ನು ಬಲಪಡಿಸಿ -ರೋ. ವಿಕ್ರಮ್ ದತ್ತ

ಮಂಗಳೂರು: ರೋಟರಿ ಸದಸ್ಯರು ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಶ್ರಮಿಸಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಸಂಸ್ಥೆಯನ್ನು ಬಲಪಡಿಸಿ ಯಶಸ್ಸು ಸಾಧಿಸಬೇಕೆಂದು, ರೋಟರಿ ಜಿಲ್ಲಾ 3181ರ ಗವರ್ನರ್‌ರಾದ ರೋ. ವಿಕ್ರಮ್ ದತ್ತರವರು ಸಲಹೆ ನೀಡಿದ್ದಾರೆ. ಅವರು
ತಾ. 07.05.2025 ರಂದು ನಗರದ ಮಂಗಳೂರು ಕ್ಲಬ್ ಸಂಭಾAಗÀಣದಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಗೆ ಅಧಿಕ್ರತ ಭೆಟಿ ನೀಡಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಅಂತರಾಷ್ಟಿçÃಯ ಪ್ರತಿಷ್ಠಾನಕ್ಕೆ ಉದಾರ ದಾನ ನೀಡಬೇಕೆಂದು ವಿನಂತಿಸಿದರು.

ವಲಯ ಸಹಾಯಕ ಗವರ್ನರ್‌ರಾದ ರೋ. ಡಾ. ರಂಜನ್ ರವರು ಸಂಸ್ಥೆಯ ಸಮಾಜ ಸೇವಾ ಯೋಜನೆ ಮತ್ತು ಕಾರ್ಯಾ ಚಟುವಟಿಕೆಗಳ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಬಿಕರ್ನಕಟ್ಟೆಯಲ್ಲಿ ಕಾರ್ಯ ಚರಿಸುತ್ತಿರುವ ಲಲಿತ, ಗೀತಾ, ಅನಂತ ಆಶ್ರಮಕ್ಕೆ ಸಮಾರು ರೂ. 75,000/- ವೌಲ್ಯದ ವಿದ್ಯುತ್ ಯಂತ್ರೋಪಕರಣಗಳನ್ನು, ಹಾಗೂ ಅಡ್ಯಾರ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸುಮಾರು ರೂ. 35,000/- ಮೌಲ್ಯದ ಪೀಟೋಪಕರಣಗಳನ್ನು ದಾನದ ರೂಪದಲ್ಲಿ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ರೋ. ಗಣೇಶ್ ಕೊಡ್ಲಮೊಗರು ಅದ್ಯಕ್ಷತೆ ವಹಿಸಿ ಸಭಿಕರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೋ. ಸುದೇಶ್ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಲಯೆಗಾರರಾದ ರೋ. ರಾಜೇಂದ್ರ ಕಲ್ಬಾವಿ, ವಲಯ ಪ್ರತಿನಿಧಿಯವರಾದ ರೋ. ಕಿಶನ್ ಕುಮಾರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ರೋ. ಕೆನ್ಯೂಟ್ ಪಿಂಟೋರವರು ಅಥಿತಿಗಳ ಉಪಸ್ಥಿತಿಯನ್ನು ಗುರುತಿಸಿ ಗೌರವಿಸಿದರು. ಕಾರ್ಯದರ್ಶಿ ರೋ. ಸುದೇಶ್ ವಂಧಿಸಿದರು.

RELATED ARTICLES
- Advertisment -
Google search engine

Most Popular