ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ರಿ. ಕರೆಂಕಿ:19ನೇ ವರ್ಷದ ಗಣೇಶ ಚತುರ್ಥಿಯ ಪ್ರಯುಕ್ತ ಆಟೋಟ ಸ್ಪರ್ಧೆಗಳು

0
3

ಬಂಟ್ವಾಳ : ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ಕರೆಂಕಿಯಲ್ಲಿ19ನೇ ವರ್ಷದ ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ವತಿಯಿಂದ ಆಟೋಟ ಸ್ಪರ್ಧೆಗಳು ಶ್ರೀ ಕ್ಷೇತ್ರ ಕರೆಂಕಿಯ ವಠಾರದಲ್ಲಿ ನಡೆಯಿತು. ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ, ಅಪ್ಪದ ಪೂಜೆ ಹಾಗೂ ವಿಶೇಷ ಪಂಚಕಜ್ಜಾಯ ಸೇವೆ, ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ನಿತ್ಯ ಪೂಜೆ ನಂತರ ನಡೆದ ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಅರ್ಚಕ ಗುರುರಾಜ್ ಭಟ್ ನೆರವೇರಿಸಿದರು. ನಂತರ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕರೆಂಕಿ ಮೈದಾನದಲ್ಲಿ ಕಬಡ್ಡಿ, ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟವು ನಡೆಯಿತು.
ಸಂಜೆ ನಡೆದ. ಸಮಾರೋಪ ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಣಮ್ ಪಿ‌. ಕರೆಂಕಿ ಹಾಗೂ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಶಾಂತ್ ಕೊಂಬ್ರಬೈಲ್ ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ವಾಮದಪದವು ಇದರ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೈಲ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಇದರ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕುದನೆ, ಶ್ರೀ ಕುಪ್ಪೆಟ್ಟು ಧರ್ಮದೈವಗಳ ಚಾವಡಿ ಕಾಂಜಿಲ್ ಕೋಡಿ ಇದರ ಧರ್ಮದರ್ಶಿಗ ಸತೀಶ್ ಪೂಜಾರಿ ಕಾಂಜಿಲ್ ಕೋಡಿ, ಪ್ರಗತಿಪರ ಕೃಷಿಕರಾದ ಪದ್ಮನಾಭ ಗೌಡ ಮಣಿ, ಹಿರಿಯರಾದ ನಾರಾಯಣ ಗೌಡ ಕರೆಂಕಿ, ,ಪಂಜಿಕಲ್ಲು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಪೂವಪ್ಪ ಮೆಂಡನ್ ಕರೆಂಕಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡನಡುಗೋಡು ಬಿ ಒಕ್ಕೂಟದ ಅಧ್ಯಕ್ಷರಾದ ವಿನೋದ್ ಕುಮಾರ್ ಕರೆಂಕಿ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಠಲ ಡಿ. ದೇವಿನಗರ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗಂಗಾಧರ ಕುಲಾಲ್ ನೆಕ್ಕರೆ ಹಾಗೂ ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಅಧ್ಯಕ್ಷ ಲೀಲಾವತಿ ಸುಂದರ ಕುಲಾಲ್ ಕರೆಂಕಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಟೀಮ್ ವಿಪ್ಲವ ಅರ್ಪಿಸುವ ಕಲಾಮಾತಾ ಕಲಾವಿದರು ಬಂಟ್ವಾಳ ಅಭಿನಯಿಸಿದ ವಿಭಿನ್ನ ಶೈಲಿಯ ಕಥೆ ಕೇನ್ಲೆ ತುಳು ಸಾಮಾಜಿಕ ನಾಟಕ ನಡೆಯಿತು.
ಧೀರಾಜ್ ಮಣಿ ಸ್ವಾಗತಿಸಿ. ಧನುಷ್ ಟಿ. ಕ್ಲಬ್ ನ ವಾರ್ಷಿಕ ವರದಿ ವಾಚನ ಮಾಡಿದರು. ಆನಂದ ಕೆ. ಕರೆಂಕಿ ಕಾರ್ಯಕ್ರಮ ನಿರೂಪಿಸಿದರು .