ಪರಮ ಭಕ್ತಿಯಿಂದ ಯಶಸ್ವಿಯಾದ ಶ್ರೀ ಗಾಯತ್ರಿ ಪೂಜೆ, ಉಪಾಸನೆ

0
26

ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 26 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಶೀಗೆ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಶ್ರೀ ಗಾಯಿತ್ರಿ ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮತ್ತು ಕುಟುಂಬ ಪರಮ ಭಕ್ತಿಯಿಂದ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಯಶಸ್ವಿಯಾಯಿತು.
ಶ್ರೀ ಗಾಯಿತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್, ಗೌರವ ಅಧ್ಯಕ್ಷರಾದ ಡಾ|| ಸುಶೀಲಮ್ಮ, ಡಾ|| ರಮೇಶ್ ಪಾಟೀಲ್, ಸಂಚಾಲಕರಾದ ಭಾವನ್ನಾರಾಯಣ, ಸಮಿತಿ ಸದಸ್ಯರಾದ ಸತೀಶ್ ಆರ್.ಎಂ., ವಿ.ಕೃಷ್ಣಮೂರ್ತಿ, ಸತ್ಯನಾರಾಯಣ ಮೂರ್ತಿ, ಶಿವಕುಮಾರ್, ಕೆ.ಸಿ. ಉಮೇಶ್ ಮುಂತಾದವರು ಉಪಸ್ಥಿತರಿದ್ದರು.