ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ

0
79

ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರ ಆಮಂತ್ರಣದಂತೆ ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಇಂದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಪಡೆದರು.
ಶ್ರೀಪಾದರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರ್ಯಾಯ ಶ್ರೀಪಾದರು ಹಿಂದೂ ಸಮಾಜದ ರಕ್ಷ್ಮಣೆಯಲ್ಲಿ ಎಡನೀರು ಮಠದ ಕೊಡುಗೆಯನ್ನು ನೆನಪಿಸುತ್ತಾ ಹಿಂದಿನಿಂದಲೂ ಅಷ್ಟ ಮಠದ ಜೊತೆಗಿರುವ ಮಧುರ ಬಾಂಧವ್ಯವನ್ನು ಸ್ಮರಿಸಿಕೊಂಡು ಹೀಗೆಯೇ ಮುಂದುವರಿಯಲಿ ಎಂದು ಕಿರಿಯ ಶ್ರೀಪಾದರ ಜೊತೆಗೂಡಿ ಆಶಿಸಿದರು. ಶ್ರೀ ಮಠದಿಂದ ಸಾಂಪ್ರದಾಯಿಕ ಗೌರವವನ್ನು ಅರ್ಪಿಸಲಾಯಿತು.
ಬಳಿಕ ಪರ್ಯಾಯ ಶ್ರೀಪಾದರೊಡನೆ ಗೀತಮಂದಿರ ದರ್ಶನವನ್ನು ಪಡೆದು ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದ ಬೃಹತ್ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here