ಉಡುಪಿ ಜೂ 03 : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ, ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಜೂ 03 ರಂದು ಭಜನಾ ಮೊಹೋತ್ಸವದ ಮಂಗಳೋತ್ಸವ ವೈಭವದಿಂದ ಸ್ವಪನ್ನ ಗೊಂಡಿತ್ತು.
ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಭೇಟಿ ನೀಡಿದಾಗ ದೇವಳದವತಿಯಿಂದ ಭವ್ಯ ಸ್ವಾಗತ ನೀಡಿ , ಗುರುಕಾಣಿಕೆ ಫಲ ಪುಷ್ಪ ಗೌರವಿಸಲಾಯಿತು ಬಳಿಕ ಸ್ವಾಮೀಜಿಯವರು ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಂಡು .
ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಪಡೆದು ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಿಗೆ ಆರತಿ ಬೆಳಗಿಸಿದರು , 125 ದಿನ ಅಹೋರಾತ್ರಿ ನಿರಂತರ ಭಜನಾ ನೆಡೆಸಿಕೊಟ್ಟ ಸೇವಾದಾರರಿಗೆ, ಪಾಳಿದಾರರಿಗೆ , ಹತ್ತು ಸಮಸ್ತರಿಗೆ ಪ್ರಸಾದ ನೀಡಿ ಅನುಗ್ರಹಸಿಸುವರು.
ಜನ್ಮ ಶತಮಾನೋತ್ಸವದ ಈ ಶುಭಸಂದರ್ಭದಲ್ಲಿ ಶ್ರೀಗುರುಗಳ ಆರಾಧನೆ , ಶ್ರೀದೇವರ ಮೇಲೆ ಶ್ರಾದ್ಧ ,ನಂಬಿಕೆ ಯಿಂದ ಭಜನೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿ ಯಾಗುತ್ತದೆ , ಕನಕದಾಸರು , ಪುರಂದರದಾಸರು ರಚಿಸಿದ ಗೀತಾ ರಚನೆ ಅದ್ಭುತವಾದದ್ದು , ಯುವಜನತೆ ಸನಾತನ ಆರಾಧನೆ ಜೊತೆಗೆ ದೇಶದ ರಕ್ಷಣೆ ಕಾರ್ಯದಲ್ಲಿ ಕೈ ಜೋಡಿಸಬೇಕು , ಎಲ್ಲರಿಗೂ ದೇಶ ಮೊದಲು ಗಡಿ ರಕ್ಷಣೆ ಮಾಡುವ ಸೈನಿಕರಿಗೆ ಬೆಂಬಲ ನೀಡುವಂತೆ ಅಶಿಸಿದರು , ನೇರದ ಭಕ್ತರಿಗೆ ಆಶೀರ್ವಚನ ಮಾಡಿ ಅನುಗ್ರಹಿಸುವರು.
ವಸಂತ ಕಿಣೆ , ಗಣೇಶ್ ಕಿಣಿ , ಭಾಸ್ಕರ್ ಶೆಣೈ , ಆಡಳಿತ ಮೊಕ್ತೇಸರ ಪಿ ವಿ ಶೆಣೈ ಸ್ವಾಗತಿಸಿದರು , ಚೇ೦ಪಿ ರಾಮಚಂದ್ರ ಭಟ್ ನಿರೊಪಿಸಿದರು , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ , ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿಯ ಸದಸ್ಯರು ಉಪಸ್ಥರಿದ್ದರು.