ಉಡುಪಿ : ಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ಉಡುಪಿ , ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇದರ ವತಿಯಿಂದ ಚಿಂತನ ಮಂಥನ , ಹಾಗೂ ನಾದ ಲಹರಿ ಕಾರ್ಯಕ್ರಮ ಇದೇ ಬರುವ ಜನವರಿ 03 ರಂದು ಸಂಜೆ ದೇವಳದ ಮುಂಭಾಗದ ವೇದಿಕೆಯಲ್ಲಿ ನೆಡೆಯಲಿದೆ. ಸಂಜೆ 5-45 ರಿಂದ 6-30 ವರೆಗೆ ಪ್ರಸಿದ್ಧ ವೈದ್ಯರಾದ ಡಾ ಆರ್ ಎನ್ ಭಟ್ ದಲ್ಲಿ ವಾಸ್ತವ ಜೀವನ ಕುರಿತು ಚಿಂತನ ಮಂಥನ ನೆಡೆಸಿಕೊಡಲಿದ್ದಾರೆ. ಬಳಿಕ ನಾದ ಲಹರಿ ಸಂಗೀತ ಕಾರ್ಯಕ್ರಮದಲ್ಲಿ , ಪ್ರಸಿದ್ಧ ವಾಯಲಿನ್ ವಾದಕರಾದ ಟಿ ರಂಗ ಪೈ , ಪ್ರಸಿದ್ಧ ತಬಲ ವಾದಕರಾದ ರಾಮಚಂದ್ರ ಭಕ್ತ ಇವರಿಂದ ವಾಯಲಿನ್ -ತಬಲಾ ದ್ವಂದ್ವ ನೆಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

