ನಶೆ ಮುಕ್ತ ಮಂಗಳೂರು ಉದಯಿಸಲಿ-ಡಾ. ಚೂಂತಾರು.
ಡ್ರಗ್ ಮುಕ್ತ ಕರ್ನಾಟಕದ ಅಭಿಯಾನ ವ್ಯಸನ ಮುಕ್ತ ಮಂಗಳೂರು ಎಂಬ ಆಶಯದೊಂದಿಗೆ ಕಿರು ಚಿತ್ರ ಹೊತ್ತ ಜನಜಾಗೃತಿ ರಥಯಾತ್ರೆಯು ಮಂಗಳೂರಿನ ಮಂಗಳಾ ಸಮೂಹ ವಿದ್ಯಾಸಂಸ್ಥೆಗಳು ನೀರು ಮಾರ್ಗ ಇಲ್ಲಿ ವಿಧ್ಯಾರ್ಥಿಗಳನ್ನು ಕುರಿತು ಯುವ ಸಮುದಾಯಕ್ಕೆ ಮಾದಕ ವ್ಯಸನದ(ಡ್ರಗ್ಸ್) ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮುರಲೀ ಮೋಹನ್ ಚೂಂತಾರು ಮತ್ತು ಪರಿ ವರ್ತನಾ ಟ್ರಸ್ಟ ಇದರ ಸಂದೇಶ್ ಇವರು ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಬದಲ್ಲಿ, ಹೇಮಂತ್, ಮಂಗಳಾ ಕಾಲೆಜಿನ ಧರ್ಮರಾಜ್ ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು.ಮುನ್ನೂರು ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದರು.


