ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಪದವಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಧೀರಜ್, ಯುನೈಟೆಡ್ ಪಬ್ಲಿಷರ್ಸ್ನ ಮ್ಯಾನೇಜಿಂಗ್ ಪಾರ್ಟ್ನರ್ ಹಾಗೂ “ಆನ್ಲೆನ್ ಕಲಿಕೆ”
ಲೈಬ್ರರಿಯ ಸ್ಥಾಪಕರಾದ ಇವರು ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ಲೈಬ್ರರಿಗಳ ಮಹತ್ವವನ್ನು ಹೇಗೆ ಅರಿತುಕೊಳ್ಳಬೇಕು ಎಂಬುವುದನ್ನು ತಿಳಿಸಿದರು. ಡಿಜಿಟಲ್
ಲೈಬ್ರರಿಯ ವ್ಯಾಖ್ಯಾನ, ಅದರ ಬೆಳವಣಿಗೆ, ಬಳಕೆಯ ಲಾಭಗಳು ಮತ್ತು ವಿವಿಧ ಡಿಜಿಟಲ್ ಮೂಲಸೌಕರ್ಯಗಳ ಕುರಿತು ಮಾಹಿತಿ ನೀಡಿದರು. ಹಾಗೂ ಅವರು ಸ್ಥಾಪಿಸಿದ “ಆನ್ಲೆನ್ ಕಲಿಕೆ
ಲೈಬ್ರರಿ” ಎಂಬ ಡಿಜಿಟಲ್ ಪಠ್ಯಸಾಗರದ ವ್ಯವಸ್ಥೆ ಹಾಗೂ ಅದರಲ್ಲಿನ ಉಚಿತ ಪಠ್ಯಸಾಧನಗಳ ಕುರಿತು ವಿವರಿಸಿದರು.
ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, ಗ್ರಂಥಪಾಲಕಿ ಐಸಿರಿ ಕಾರ್ಯಕ್ರಮವನ್ನು ನಿರೂಪಿಸಿದರು.