ಉಳ್ಳಾಲ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬಿಎ ಸೈಕೋಲಾಜಿ ವಿದ್ಯಾರ್ಥಿನಿ

0
43

ಉಳ್ಳಾಲ: ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ತಲಪಾಡಿಯ ಕಿನ್ನದಲ್ಲಿ ನಡೆದಿದೆ. 19 ವರ್ಷದ ಶ್ರೇಯಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಶ್ರೇಯಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಆಕೆಯನ್ನು ಕಪ್ಪು ಎಂದು ಅವಮಾನಿಸುತ್ತಿದ್ದ ಬಗ್ಗೆ ಬರೆದಿದ್ದಾಳೆ. ಅಲ್ಲದೇ, ಮೇ ತಿಂಗಳಿನಲ್ಲಿ ಶ್ರೇಯಾ ಬರೆದಿರುವ ಡೆತ್ ನೋಟೊಂದು ಸಿಕ್ಕಿದೆ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ನಾನು ಬದುಕಬಾರದು, ಮನೆಯವರಿಗೆ ಕಷ್ಟವಾಗುತ್ತದೆ ಎಂದು ಬರೆದಿದ್ದಾಳ ಎಂದು ತಿಳಿದುಬಂದಿದೆ.

ಮನೆಯ ಕಪಾಟಿನ ಮೇಲೆ, ಐ ಡೋಂಟ್ ಲೈಕ್ ದಿಸ್ ಜನರೇಷನ್, ಸೋ, ಐ ಡಿಸೈಡೆಡ್ ಟು ಸೂಸೈಡ್ ಎಂದು ಬರೆದಿದ್ದಾಳೆ. ಇನ್ನು ಶ್ರೇಯಾ, ಫಸ್ಟ್ ಸೆಮ್ ನಲ್ಲಿ ಎರಡು ಸಭೆಕ್ಟ್ ನಲ್ಲಿ ಫೇಲಾಗಿದ್ದಳಂತೆ. ಮೌನಿಯಾಗಿದ್ದ ಶ್ರೇಯಾ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲವೆಂದು ಆಕೆಯ ಕುಟುಂಬ ಮೂಲಗಳು ತಿಳಿಸಿವೆ.

ಈಗಾಗಲೇ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here