ಮಹಾವೀರ ಪ್ರಥಮದರ್ಜೆಕಾಲೇಜು, ಮೂಡುಬಿದಿರೆಯಲ್ಲಿ ಯುವರೆಡ್‌ಕ್ರಾಸ್ ಘಟಕ ಆಯೋಜಿಸಿರುವ ನಾಲ್ಕು ದಿನದವಾರ್ಷಿಕ ವಿಶೇಷ ಶಿಬಿರ 2025-26ರ ಸಮಾರೋಪ ಸಮಾರಂಭ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗ ಬೇಕು, ಸಮಾಜದಲ್ಲಿ ನಮಗಿಂತ ಕೆಳಮಟ್ಟದಲ್ಲಿರುವವರು ಇದ್ದಾರೆ ಅಂತವರಿಗೆ ನಾವು ಸಹಾಯ ಮಾಡುವಗುಣವನ್ನು ಬೆಳೆಸಿಕೊಳ್ಳಬೇಕು”ಎಂದರು ಹಾಗೂ ಶಿಬಿರದ ಯಶಸ್ಸಿಗೆ ಕಾರಣರಾದಎಲ್ಲರನ್ನು ಪ್ರಶಂಶಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್‌ಅವರು ಮಾತನಾಡಿ, “ರೆಡ್‌ಕ್ರಾಸ್‌ನ ಮುಖ್ಯಉದ್ದೇಶ ರಕ್ತದಾನವಾದರೂ ಅದರ ಜೊತೆಗೆ ಸಮಾಜಸೇವೆ ಮಾಡುವಗುಣವನ್ನು ಇದರಿಂದ ಕಲಿಯುತ್ತೇವೆ. ಈ ಶಿಬಿರವು ತುಂಬಾ ಯಶಸ್ವಿಯಾಗಿ ನೆರವೇರಿದೆ” ಎಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೆಫ್ಟಿನೆಂಟ್ ವಿಜಯಲಕ್ಷ್ಮಿ ಮಾತನಾಡಿ, “ರೆಡ್‌ಕ್ರಾಸ್ ಕೇವಲ ಒಂದು ಸಂಸ್ಥೆಯಲ್ಲ, ಇದು ಕಷ್ಟ ದಲ್ಲಿರುವವರಿಗೆ ಸಹಾಯ ಮಾಡಲು, ಮಾನವೀಯತೆ ಮತ್ತು ಸೇವಾಭಾವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ .ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಸಮಾಜದ ಬಗ್ಗೆ ಜವಾಬ್ದಾರಿ ಮತ್ತು ಕಾಳಜಿ ಬೆಳೆಯುತ್ತದೆ”ಎಂದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಮಾತನಾಡಿ, “ನಾಲ್ಕು ದಿನಗಳ ಕಾಲ ನಡೆದ ಈ ಶಿಬಿರ ಇಂದು ಸಮಾರೋಪಗೊಂಡಿದೆ.ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ಶಿಸ್ತು, ಸಹಕಾರ, ಸೇವಾಭಾವ ಮತ್ತು ನಾಯಕತ್ವದ ಮಹತ್ವವನ್ನುಅರಿತುಕೊಂಡಿದ್ದಾರೆ. ಈ ಶಿಬಿರದ ಯಶಸ್ಸಿಗೆ ಶ್ರಮಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ, ಸಂಯೋಜಕರಿಗೆ ಮತ್ತು ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ನನ್ನ ಅಭಿನಂದನೆಗಳು”ಎಂದರು. ಯುವರೆಡ್‌ಕ್ರಾಸ್‌ಅಧಿಕಾರಿ ಶ್ರೀಗೌರಿ ಶಿಬಿರ ವರದಿಯನ್ನು ವಾಚಿಸಿದರು.ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಪದವಿಪೂರ್ವಕಾಲೇಜಿನ ಯುವರೆಡ್‌ಕ್ರಾಸ್ ಘಟಕದ ಅಧಿಕಾರಿ ಗೀತಾರಾಮಕೃಷ್ಣ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಯುವರೆಡ್‌ಕ್ರಾಸ್‌ಘಟಕದ ನಾಯಕಿ ಶ್ಲಾಘನಾ, ಯುವರೆಡ್‌ಕ್ರಾಸ್‌ತಂಡದ ನಾಯಕಿಯರು ಮೀನಾಕ್ಷಿ, ತನುಜಾ, ನಮ್ರತಾ ಮತ್ತುಅನನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುಯುವರೆಡ್‌ಕ್ರಾಸ್‌ಘಟಕದ ವಿದ್ಯಾರ್ಥಿಗಳಾದ ಪದ್ಮಶ್ರೀ ಸ್ವಾಗತಿಸಿ, ಮೆರಿಟಾ ವಂದಿಸಿ ಹಾಗೂ ರಿತಿಕಾಕಾರ್ಯಕ್ರಮ ನಿರೂಪಿಸಿದರು.

