ಉಡುಪಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಇಲ್ಲಿನ ಶ್ರೀ ರಘುನಾಯಕ ಜಪ ಕೇಂದ್ರ ಕ್ಕೆ ನ 13 ರ ಗುರು ವಾರ ಸಂಜೆ ನೆಡೆಯಿತು , ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ 550 ವರ್ಷದ ಆಚರಣೆಯ ಪ್ರಯುಕ್ತ ” ಶ್ರೀರಾಮ ದಿಗ್ವಿಜಯ ರಥ ” ಬದರಿ ಕ್ಷೇತ್ರ ದಿಂದ ಆರಂಭ ಗೊಂಡು ವಾರಾಣಸಿ , ಅಯೋದ್ಯೆ , ಮುತಾಂದಹ ವಿವಿಧ ಪುಣ್ಯ ಕ್ಷೇತ್ರ ಗಳಿಗೆ ಭೇಟಿ ನೀಡಿ ಸಾಗಿ ಬಂದ ” ಶ್ರೀರಾಮ ದಿಗ್ವಿಜಯ ರಥ “ವನ್ನು ಹಳೇ ಡಯಾನ ವೃತ್ತದ ಬಳಿ ಪೂರ್ಣ ಕುಂಭ ಸ್ವಾಗತ , ಮಂಗಳವಾದ್ಯ , ಚಂಡೆವಾದನ , ಶ್ರೀ ರಾಮನಾಮ ಸ್ಮರಣೆ ಪಠಿಸುತ್ತಾ ದೇವಳಕ್ಕೆ ಕರೆತರಲಾಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಧಾರ್ಮಿಕ ಪೂಜಾ ಕಾರ್ಯಗಳು ವಿನಾಯಕ ಭಟ್ , ದಯಾಘನ್ ಭಟ್ , ದೀಪಕ್ ಭಟ್ ಹಾಗೂ ಮಠದ ಅರ್ಚಕವೃಂದವರು ನಡೆಸಿಕೊಟ್ಟರು.
ದೇವರಿಗೆ ವಿಶೇಷ ಅಲಂಕಾರ , ಶ್ರೀ ರಾಮ ನಾಮ ಜಪ ಪಠಣ , ಭಜನಾ ಸೇವೆ, ದೀಪಾಲಂಕಾರ ಸೇವೆ , ಪ್ರಸನ್ನ ಪೂಜೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ , ಸಮಾರಾಧನೆ ನಡೆಯಿತು.
ರಾಮ ನಾಮ ಜಪ ಅಭಿಯಾನ ಸಮಿತಿಯ ದೀಪಕ್ ಶಾನ್ ಭಾಗ್ , ಶಂಕರ್ ಶೆಣೈ , ಸಂದೀಪ್ ನಾಯಕ್ , ಜಗದೀಶ್ ಪೈ, ಭಾಸ್ಕರ್ ಶೆಣೈ , ಮಟ್ಟಾರ್ ಸತೀಶ್ ಕಿಣಿ , ರಾಜೇಶ್ ಪೈ , ವಸಂತ್ ಕಿಣೆ , ಪ್ರಕಾಶ್ ಶೆಣೈ , ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು, ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು ಶ್ರೀ ರಾಮನಾಮ ಜಪ ಅಭಿಯಾನದ ಸಮಿತಿಯ ಸದಸ್ಯರು ಸಹಕರಿಸಿದರು , 2 ಸಾವಿರಕ್ಕೊ ಹೆಚ್ಚಿನ ಸಮಾಜಬಾಂಧವರು ಉಪಸ್ಥರಿದ್ದರು.

