ಯಶಸ್ವಿಯಾಗಿ ನಡೆದ ಶ್ರೀ ಶಾರದಾ ಮಹೋತ್ಸವ

0
135


ದಾವಣಗೆರೆ: ಮಂಗಲ್ಪಾಡಿ ಶಾರದಾ ಏಕಾಹ ಭಜನಾಮಂದಿರದ ಮೂವತ್ತೊಂಭತ್ತನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಸಪ್ಟೆಂಬರ್ 29 ನೇ ತಾರೀಕು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಯ ಕೇರಳ ಗಡಿನಾಡ ಶಾಖೆಯ ಪ್ರಾಯೋಜಕತ್ವದಲ್ಲಿ ಗಮಕ ವಾಚನ, ವ್ಯಾಖ್ಯಾನ ನಡೆಯಿತು. ಪುತ್ತೂರಿನ ಶ್ರೀಮತಿ ಸುಮನಾರಾವ್,ಮತ್ತು ಸುಪ್ರಜಾ ರಾವ್ ರವರು ವಾಚನ, ವ್ಯಾಖ್ಯಾನ ನಡೆಸಿಕೊಟ್ಟರು. ”ಚಂದ್ರಹಾಸ ಚರಿತೆ” ಯ ಕಾವ್ಯ ಭಾಗವನ್ನು ಸುಪ್ರಜಾರಾವ್ ರವರು ತಮ್ಮ ಮಧುರ ಕಂಠದಿAದ ವಾಚನ ಮಾಡಿದರೆ ಸುಮನಾ ರಾವ್ ಅದ್ಬುತವಾಗಿ ವ್ಯಾಖ್ಯಾನ ಮಾಡಿದರು. ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಕಲಾಸ್ವಾಧನೆ ಮಾಡಿದರು.”ಕಲಾಕುಂಚ” ಕೇರಳ ಗಡಿನಾಡ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ್ ಹಾಗೂ ರಾಮಕಾರಂತರು ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಜಯಲಕ್ಷ್ಮಿ ಕಾರಂತ್, ರಾಮ ಕಾರಂತ್ ದಂಪತಿಗಳು ಹಾಗೂ ಶಾರದಾ ಮಹೋತ್ಸವದ ಅಧ್ಯಕ್ಷರಾದ ರಾಧಾಕೃಷ್ಣ ತುಂಗ ಕಲಾವಿದರನ್ನು ಸನ್ಮಾನಿಸಿದರು. ಜಯಲಕ್ಷ್ಮಿ ಆರ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ , ಸಂಸ್ಥಾಪಕರು, ಕಲಾಕುಂಚ ,ದಾವಣಗೆರೆ ಇವರು ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here