ಕಾಸರಗೋಡು ದಸರಾ ಉದ್ಘಾಟಕರಾಗಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀಮಡೆದನೀರು ಮಠ, ಒಪ್ಪಿಗೆ

0
11

ಕಾಸರಗೋಡು : ಕನ್ನಡ ಭವನ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದಲ್ಲಿ ಕಳೆದ 2007 ರಿಂದ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಹಾಗೂ ಕಾಸರಗೋಡು ಪ್ರದೇಶದ ವಿವಿಧ ಬಾಗಗಳಲ್ಲಿ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪುನಃ ಸ್ಥಾಪಿಸುವ ಮಹದುದ್ದೇಶದಿಂದ ನಿರಂತರ 10ದಿನಗಳ ಕಾಲ,ಸಂಕೀರ್ತನಾ ದಶಾಹ, ಕವಿ ಸಮ್ಮೇಳನ, ಕಾಸರಗೋಡು ದಸರಾ ಕವಿಗೋಷ್ಠಿ, ನ್ರಿತ್ಯ, ಸಂಗೀತ, ಯಕ್ಷಗಾನಗಾನ ವೈಭವ, ಹೀಗೆ ವಿವಿಧ ಕನ್ನಡ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಕಾಸರಗೋಡು ಪ್ರದೇಶಕ್ಕೆ ಹೆಮ್ಮೆ ತರುವಂತ ಕಾರ್ಯದಲ್ಲಿ ಮುಂದೆ ನಿಂತಿದೆ, ಕನ್ನಡ ಭವನ ಮತ್ತು ಗ್ರಂಥಾಲಯ.
ಈ ಬಾರಿ ಸುಮಾರು 28 ಅಂತರ್ ಜಿಲ್ಲಾ ಮಟ್ಟದಲ್ಲಿ ಭಜನಾ ಸಂಕೀರ್ತನ ತಂಡಗಳು ಭಾಗವಹಿಸುತ್ತಿದೆ. ಕಾಸರಗೋಡು ದಸರಾ ಕವಿ ಸಮ್ಮೇಳನ -ಕವಿಗೋಷ್ಠಿ ಯಲ್ಲಿ ಅಂತರ್ ರಾಜ್ಯ ಮಟ್ಟದ 61ಮಂದಿ ಖ್ಯಾತ ಕವಿಗಳು ಭಾಗವಹಿಸುತ್ತಿದ್ದಾರೆ. ಭಾಗವಹಿಸುವ ಎಲ್ಲ ಕವಿಗಳಿಗೆ “ಕಾಸರಗೋಡು ದಸರಾ ಕವಿ ಸಾಧಕ ಸನ್ಮಾನ “ನೀಡಿ ಗೌರವಿಸಲಾಗುತ್ತಿದೆ. ಕೇರಳ -ಕರ್ನಾಟಕದ ಶ್ರೇಷ್ಠ 21ಮಂದಿಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಗುರುರಾಜ್ ಕಾಸರಗೋಡು ಸಾರತ್ಯದಲ್ಲಿ ನ್ರಿತ್ಯ ಗಾನ ವೈಭವ -ಕಲಾವಿಧರ ಕಲರವ ” ವಸಂತ ಬಾರಡ್ಕ ತಂಡದಿಂದ ಭಕ್ತಿ ಗಾಯನಾರ್ಚನೆ.. ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆ, ಮುಂತಾದ ಕಾರ್ಯಕ್ರಮಗಳ ಮೂಲಕ ನಡೆಸಲ್ಪಡುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “11.10.2026.ರಿಂದ 20.10.2026.ರ ವರೆಗೆ ನಡೆಯಲಿರುವ ಸಂಪೂರ್ಣ ಕಾಸರಗೋಡು ದಸರಾ ಕಾರ್ಯಕ್ರಮವನ್ನು ಕನ್ನಡ ಭವನದ ಗುರುಶ್ರೀಗಳಾದ ಶ್ರೀಮಡೆದನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು 20.10.2026.ಭಾನುವಾರ ಬೆಳಿಗ್ಗೆ 10.30 ನಡೆಯಲಿರುವ ಕಾಸರಗೋಡು ದಸರಾ ಉದ್ಘಾಟನೆ ಯನ್ನು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಚಾಲನೆ ಗೊಳಿಸಲಿದ್ದಾರೆ ಎಂದು ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಅಧ್ಯಕ್ಷರಾದ ಶ್ರೀ ಪಾಂಗೋಡು ಪ್ರವೀಣ್ ನಾಯಕ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.