ಹಳೆಯಂಗಡಿ: ಇಲ್ಲಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು ಇದರ 2025-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಜರಗಿತು.
ಕ್ಲಬ್ ನ ಗೌರವಾಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಜಗದೀಶ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಸುರೇಖಾ ಕಲ್ಲಾಪು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ದೇವಾಡಿಗ ಅವರು ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಆಚಾರ್ಯ, ಶೈಲಾ ಶೆಟ್ಟಿಗಾರ್, ಹಾಗೂ ಕೋಶಾಧಿಕಾರಿಯಾಗಿ ಜಗದೀಶ್ ಕುಲಾಲ್ ಅವರು ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚಂದ್ರಸುವರ್ಣ ಹಾಗೂ ನೀಮಾ ಸನಿಲ್, ಆರೋಗ್ಯ ನಿಧಿ ಕಾರ್ಯದರ್ಶಿಯಾಗಿ ಅರ್ಫಾಜ್, ಲೆಕ್ಕಪರಿಶೋಧಕರಾಗಿ ಸುಭಾಸ್ ಅಮೀನ್, ಕ್ರೀಡಾ ಕಾರ್ಯದರ್ಶಿಯಾಗಿ ಗೌತಮ್ ಬೆಲ್ಚೆಡ ಆಯ್ಕೆಯಾದರು. ತಂಡದ ನಾಯಕರಾಗಿ ನೀರಜ್ ಕಿರೋಡಿಯನ್ ಮತ್ತು ಉಪನಾಯಕರಾಗಿ ಸಚಿನ್ ಆಚಾರ್ಯ ಅವರನ್ನು ನೇಮಿಸಲಾಯಿತು.

