ಶ್ರೀ ವಿಶ್ವೇಶತೀರ್ಥ ಸ್ಮೃತಿ ವನ ಪೇಜಾವರ ಮಠಕ್ಕೆ ಹಸ್ತಾಂತರ

0
30

ಉಡುಪಿ : ಅರಣ್ಯ ಇಲಾಖೆಯ 2 ಕೋಟಿ ರೂ ಅನುದಾನದಲ್ಲಿ ಉಡುಪಿ ಜಿಲ್ಲೆ ನೀಲಾವರ ಗ್ರಾಮದಲ್ಲಿ ನಿರ್ಮಾಣಗೊಂಡು ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿದ್ದ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿ ವನವು ಗುರುವಾರ ಅಧಿಕೃತವಾಗಿ ಇಲಾಖೆಯಿಂದ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿತು.

ಬಿ.ಎಸ್ ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ನಲ್ಲಿ ಸ್ಮೃತಿವನ ನಿರ್ಮಾಣವನ್ನು ಘೋಷಿಸಿ ಎರಡು ಕೋಟಿ ರೂ ಅನುದಾನ ನೀಡಿದ್ದರು.‌ ರಾಜ್ಯ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಕಳೆದ ಮೇ ತಿಂಗಳಲ್ಲಿ ಉದ್ಘಾಟಿಸಿದ್ದರು. ಉಡುಪಿ ನಿರ್ಮಿತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಸಿತ್ತು. ಇದೀಗ ಅರಣ್ಯ ಇಲಾಖೆಯು ಸ್ಮೃತಿವನವನ್ನು ಪೇಜಾವರ ಮಠಕ್ಕೆ ಹಸ್ತಾಂತರಿಸಿದೆ. ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮತ್ತು ಮಠದ ಸಿ ಇ ಒ . ಸುಬ್ರಹ್ಮಣ್ಯ ಭಟ್ ಕಡತಗಳಿಗೆ ಸಹಿ ಹಾಕಿದರು. ಮಠದ ಪಿ ಆರ್ ಒ ವಾಸುದೇವ ಭಟ್ ಪೆರಂಪಳ್ಳಿ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಸ್ಮೃತಿವನ ನಿರ್ಮಾಣ ಉಸ್ತುವಾರಿ ಪವನ್ ಪೆರುಮುಂಡ ಉಪಸ್ಥಿತರಿದ್ದರು.