ಶ್ರೀಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಳಯದ ಪುನ: ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

0
150

ಮೂಡುಬಿದಿರೆ: ದರೆಗುಡ್ಡೆ ಕೊನ್ನಾರ ಮಾಗಣೆಯ ಶ್ರೀಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಳದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದ್ದು, ಪುನ: ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್‌ 23ರಿಂದ ಮೇ 2ರವರೆಗೆ ಮತ್ತು ಜಾತ್ರೋತ್ಸವವು ಮೇ 2ರಿಂದ ಮೇ 07ರವರೆಗೆ ಕೆ. ನರಸಿಂಹ ತಂತ್ರಿ, ರಾಘವೇಂದ್ರ ತಂತ್ರಿ ಮತ್ತು ಕಳತ್ತೂರು ಉದಯ ತಂತ್ರಿಯರು ಹಾಗೂ ಅರ್ಚಕರಾದ ನಾಗರಾಜ್‌ ಭಟ್‌ ಇವರುಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ -ವಿಧಾನಗಳೊಂದಿಗೆ ನಡೆಯಲಿದೆ.

ಎಪ್ರಿಲ್‌ 27 ರಂದು ಸಂಜೆ 4 ಗಂಟೆಗೆ ಸರಿಯಾಗಿ ಅಳಿಯೂರು ಸರಕಾರಿ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಯ ಮೈದಾನದಿಂದ ವೈಭವೋಪೇತ ವಿಜೃಂಭಣೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಾ.12ರಂದು ನಾಗ ಪ್ರತಿಷ್ಠಾಪನೆ, 16ರಂದು ಧ್ವಜ ಸ್ತಂಭಪ್ರತಿಷ್ಠಾಪನಾ ಕಾರ್ಯಕ್ರಮ, ಎ.30ಕ್ಕೆ ಶ್ರೀ ಸೋಮನಾಥ ದೇವರು, ಅಗ್ನಿ ಗಣಪತಿ ಹಾಗೂ ಮಹಿಷಮರ್ದಿನಿ ದೇವಿಯ ಪ್ರತಿಷ್ಠಾಪನೆ, ಮೇ 2ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here