ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉಡುಪಿ

0
3

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ರಾಜ್ಯದ ಎಲ್ಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ಜರಗಿದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉಡುಪಿಯ ಲೀಕೋ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರು ಮತ್ತು ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷರಾದ ಎಚ್ ಜಯಪ್ರಕಾಶ್ ಕೆದ್ಲಾಯರವರು ಉದ್ಘಾಟಿಸಿದರು.

ಮಹಾಮಂಡಳದ ವತಿಯಿಂದ ರಾಜ್ಯದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕ್ಗಳ ಬಗ್ಗೆ ಮಹಾಮಂಡಳದ ಅಧ್ಯಕ್ಷರಾದ ಎಚ್ ಕೆ ಪಾಟೀಲ ಅಧ್ಯಕ್ಷತೆಯಲ್ಲಿ ಕೈಗೊಳ್ಳುತ್ತಿರುವ ಉಪಯುಕ್ತ ಸಲಹೆ ಸಹಕಾರ ಮತ್ತು ಕಾರ್ಯಕ್ರಮಗಳ ಬಗ್ಗೆ ಸಭೆಗೆ ಕೆದ್ಲಾಯರು ತಿಳಿಸಿದರು.ಪಟ್ಟಣ ಸಹಕಾರಿ ಬ್ಯಾಂಕುಗಳು ಸಾಂಪ್ರದಾಯಿಕ ಹಳೆ ಬ್ಯಾಂಕಿಂಗ್ ವ್ಯವಸ್ಥೆಯಿಂದ ನೂತನವಾಗಿ ವೃತ್ತಿಪರ ನಿರ್ವಹಣೆಗೆ ಒಳಪಟ್ಟು ನೂತನ ವ್ಯವಸ್ಥೆಗೆ ಹೊಂದಿಕೊಂಡು ಸದಸ್ಯರ ವಿಶ್ವಾಸ ಠೇವಣಿದಾರರ ರಕ್ಷಣೆಯೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಕ್ಕೆ ಒಳಪಟ್ಟು ಉತ್ತಮ ಆಡಳಿತವನ್ನು ನೀಡುವುದು ಯಶಸ್ವಿ ಸಹಕಾರಿ ಬ್ಯಾಂಕಿಗೆ ಅಡಿಪಾಯವಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಬ್ಯಾಂಕಿನ ನಿರ್ದೇಶಕರು ಸದಸ್ಯರ ಪ್ರತಿನಿಧಿಯಾಗಿ ಠೇವಣಿದಾರರ ರಕ್ಷಕರಾಗಿ ಬ್ಯಾಂಕಿನ ಭವಿಷ್ಯದ ಶಿಲ್ಪಿಯಾಗಿ ಪಾರದರ್ಶಕತೆಯಿಂದ ಜವಾಬ್ದಾರಿಯುತವಾಗಿ ಹೊಣೆಗಾರಿಕೆಯಿಂದ ವರ್ತಿಸುವುದು ಅಗತ್ಯ ಎಂದು ಕೆದ್ದಾಯರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಅರ್ಬನ್ ಬ್ಯಾಂಕುಗಳಲ್ಲಿ ನೂತನ ಪೀಳಿಗೆಯವರು ವ್ಯವಹಾರ ನಡೆಸಬೇಕಾದರೆ ನೂತನ ತಂತ್ರಜ್ಞಾನವನ್ನು ಅಳವಡಿಸುವುದರ ಬಗ್ಗೆ ಸಭೆಯಲ್ಲಿ ಒತ್ತಿ ಹೇಳಿದರು.

ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಹಾಮಂಡಳದ ನಿರ್ದೇಶಕರಾದ ಬನಶಂಕರಿ ಎಚ್ ಆರ್, ಶಿವಕುಮಾರ್ ಗುಂಡಗಿ, ಅಂಬೋರೆ ಪಿ ಸುರೇಶ್ ಮತ್ತು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ದಿನಕರ ಶೆಟ್ಟಿ, ನಾರಾಯಣಗುರು ಅರ್ಬನ್ ಕೊ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್, ಲೀಕೋ ಬ್ಯಾಂಕಿನ ಅಧ್ಯಕ್ಷರಾದ ಕೃಷ್ಣ ಕೆ, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್ ಕೆ ಉಪಸ್ಥಿತರಿದ್ದರು. ಮಹಾಮಂಡಳದ ಡೆಪ್ಯೂಟಿ ಸಿಇಓ ಅನಿಲ್ ಹೆಚ್ ಕೆರೆಸೂರ್ ಸ್ವಾಗತಿಸಿ ಲಿಕೋ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಪುರುಷೋತ್ತಮರವರು ಧನ್ಯವಾದ ಸಮರ್ಪಿಸಿದರು. ಮಹಾಮಂಡಳದ ಗೌರವ ಸಲಹೆಗಾರರಾದ ಸುಧಾಕರ್ ಭಟ್ ಹಾಗೂ ಡಾ. ಗುರುಸ್ವಾಮಿ ಯವರು ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು ನಿರ್ದೇಶಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.