ಪಡುಕುಡೂರು : ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಯ ಬಳಿಕ ಸಮಾನ ಮನಸ್ಕ ಯುವಕರು ಸ್ಥಾಪಿಸಿದ ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್ ಕ್ಲಬ್ ಸರವರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದೆ. ಕ್ಲಬ್ಬಿನ ಸೇವೆ ನಿರಂತರವಾಗಿರಲಿ, ನಮ್ಮೇಲ್ಲರ ಸಹಕಾರ ಸದಕಾಲವೂ ಇರುತ್ತದೆ ಎಂದು ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಸ್ಥಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಪಡುಕುಡೂರು ಮತ್ತು ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಯ ಪ್ರಥಮ ವರ್ಷದ ಸಂಭ್ರಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ ಮಾತನಾಡಿ ಯೂತ್ ಕ್ಲಬ್ ಮೂಲಕ ನಿರಂತರವಾಗಿ ಮಾದರಿ ಶಾಶ್ವತ ಕಾರ್ಯಕ್ರಮಗಳನ್ನು ನಡೆಸಬೇಕು, ಪಡುಕುಡೂರಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ನಮ್ಮೂರಿನಿಂದ ಐಎಎಸ್ ಐಪಿಎಸ್ ಅಧಿಕಾರಿಗಳು ಮೂಡಿಬರಬೇಕು, ಪ್ರತಿಭಾವಂತರು ಶ್ರಮಪಟ್ಟು ಆ ಸಾಧನೆ ಮಾಡಬೇಕು, ಅದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ನಾವು ಸದಾಸಿದ್ಧ ಎಂದರು.
ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಪಡುಕುಡೂರು ಅಧ್ಯಕ್ಷ ಸಂದೀಪ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಯೂತ್ ಕ್ಲಬ್ ಮೂಲಕ ಶಾಶ್ವತವಾದ ನಿರಂತರ ಕಾರ್ಯಕ್ರಮ ಸಹಿತ ಹಲವು ಯೋಜನೆ ಯೋಚನೆಗಳಿವೆ. ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆಯ ಬಳಿಕ ಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ, ವೇದಮೂರ್ತಿ ರವಿರಾಜ್ ಉಪಾಧ್ಯಾಯ ಸೂರಿಮಣ್ಣು ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಂಗನವಾಡಿ ಮತ್ತು ಪಡುಕುಡೂರು ಶಾಲೆಯ ಮಕ್ಕಳಿಂದ ನೃತ್ಯ ವೈವಿಧ್ಯ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಿಂದ ಯಕ್ಷಗಾನ ” ರುಕ್ಮಿಣಿ ಕಲ್ಯಾಣ” ನಡೆಯಿತು. ಪಡುಕುಡೂರಿನ ವಿವಿಧ ಕ್ಷೇತ್ರಗಳ ಸಾಧಕರಾದ ಹೈನುಗಾರಿಕೆಯಲ್ಲಿ ರವಿ ಶೆಟ್ಟಿ ಹೊಸಮನೆ, ತೋಟಗಾರಿಕೆಯಲ್ಲಿ ಉದಯ ಪೂಜಾರಿ ತಿಮ್ಮೋಟ್ಟು, ಭತ್ತ ಬೇಸಾಯದಲ್ಲಿ ಸುಮತಿ ಪೂಜಾರಿ ಕೌಂಟೆ, ಭತ್ತದ ಭಿತ್ತನೆಯಲ್ಲಿ ಭೋಜ ಪೂಜಾರಿ ಕುಂಜಳಿಗೆ, ಬೆಳ್ಳಿ ಶಿಲ್ಪಿ ನಾಗರಾಜ ಆಚಾರ್ಯ ಪಡುಕುಡೂರು, ಪಡುಕುಡೂರು ಗರಡಿ ಪೂಜಾರಿಯವರಾದ ಸುಂದರ ಪೂಜಾರಿ ಅವರಿಗೆ ಊರಿನ ಗೌರವ ಸಮರ್ಪಣೆ ನಡೆಯಿತು. ಕಳೆದ ಸಾಲಿನಲ್ಲಿ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ೮೫ ಶೇಕಡಾ ಮತ್ತು ದ್ವಿತೀಯ ಪಿಯುಸಿಯಲ್ಲಿ ೯೦ ಶೇಕಡ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದೀಕ್ಷಾ ಆಚಾರ್, ಸಾನ್ವಿಕಾ, ಸುಚೀತಾ, ಪ್ರಣೀತಾ, ಚಿನ್ಮಯ್ ಅವರಿಗೆ ಸನ್ಮಾನ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಯ ಕಾರ್ಯದಲ್ಲಿ ಸಹಕಾರ ನೀಡಿದ ಹಿರಿಯರಾದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಸಮಿತಿಯ ಅಧ್ಯಕ್ಷ ಜಗದೀಶ ಹೆಗ್ಡೆ ಪಟೇಲರಮನೆ, ಮಾಧ್ಯಮ ಸಲಹೆಗಾರ ಪತ್ರಕರ್ತ ಸುಕುಮಾರ್ ಮುನಿಯಾಲ್ ಸಹಿತ ಹಲವರನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್, ಮುನಿಯಾಲು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಟಿ.ಭುಜಂಗ ಶೆಟ್ಟಿ ಪಡುಕುಡೂರು, ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ, ಮುಖಂಡ ಮುನಿಯಾಲು ಶಂಕರ ಶೆಟ್ಟಿ ಪಡುಕುಡೂರು, ಡಾ.ಕೆ.ಸುದರ್ಶನ್ ಹೆಬ್ಬಾರ್ ಮುನಿಯಾಲು, ಹಿರಿಯರಾದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಪಡುಕುಡೂರು ಡೈರಿ ಅಧ್ಯಕ್ಷ ಜಗದೀಶ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಮುನಿಯಾಲು ಸೀತಾರಾಮ ಕಡಂಬ, ಪಂಚಾಯಿತಿ ಸದಸ್ಯೆ ತಾರಾವತಿ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವೀಚಾರಕಿ ಸುಮಲತಾ, ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಯಶ್ ಅಜಿಲ ಮುನಿಯಾಲು, ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕಿ ರಂಜಿತಾ ಪಡುಕುಡೂರು ನಿರೂಪಿಸಿ ಶಂಕರ ಶೆಟ್ಟಿ ಮುನಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾವಿನಕಟ್ಟೆ ಸಂತೋಷ ಆಚಾರ್ಯ ಸ್ವಾಗತಿಸಿ ಪಡುಕುಡೂರು ರಕ್ಷಣ್ ಶೆಟ್ಟಿ ವಂದಿಸಿದರು.

