“ವಿದ್ಯಾರ್ಥಿಗಳು ಜೀವನದಲ್ಲಿಯಶಸ್ಸನ್ನು ಸಾಧಿಸುವುದರಜೊತೆಗೆಉತ್ತಮ ಸಮಾಜವನ್ನುಕಟ್ಟಬೇಕು.”-ಡಾ. ಕೆ. ಪ್ರಕಾಶ್ ಶೆಟ್ಟಿ

0
10


 ರಾಮಕೃಷ್ಣ ಮಠದಲ್ಲಿ ಪ್ರಜ್ಞಾ-೨೦೨೬ ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ
 ಸುಮಾರು೭೫೦ಕ್ಕೂ ಹೆಚ್ಚು ವೃತ್ತಿಪರ ವಿದ್ಯಾರ್ಥಿಗಳು ಭಾಗಿ
“ಸ್ವಾಮಿ ವಿವೇಕಾನಂದರಜೀವನ ಮತ್ತು ಚಿಂತನೆಗಳಲ್ಲಿ ಅತ್ಯಂತ ಆಳವಾಗಿ ಸ್ಪರ್ಶಿಸುವ ಗುಣವೆಂದರೆಅವರಆತ್ಮವಿಶ್ವಾಸ. ತಮ್ಮ ಮೇಲೆ ಹಾಗೂ ನಮ್ಮದೇಶದ ಸಂಸ್ಕೃತಿ, ಆಚಾರ–ವಿಚಾರಗಳಮೇಲೆಅವರಿಗಿದ್ದನಂಬಿಕೆಗಮನಾರ್ಹವಾದುದು. ಜೀವನದಲ್ಲಿನಮಗೆದೊರೆಯುವಪ್ರತಿಯೊಂದುಅವಕಾಶಕ್ಕಿAತಲೂಮುಖ್ಯವಾದುದು ಆ ಅವಕಾಶವನ್ನುಎದುರಿಸುವ ನಮ್ಮ ಮನೋಭಾವಎಂದುಅವರು ತಿಳಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದಅವರು, ತಮ್ಮಜೀವನದಲ್ಲಿ ನಡೆದು ಬಂದ ಹಾದಿ ಮತ್ತು ಅನುಭವಗಳನ್ನು ಹಂಚಿಕೊAಡು, ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ಜೀವನವನ್ನು ಬದಲಾಯಿಸಬಲ್ಲವುಎಂದು ಹೇಳಿದರು. ಕೆಲಸ–ಕಾರ್ಯಗಳನ್ನುಸರಿಯಾದರೀತಿಯಲ್ಲಿಮತ್ತುಶ್ರದ್ಧೆಯಿಂದನಿರ್ವಹಿಸಿದರೆಯಶಸ್ಸುನಮ್ಮದಾಗುತ್ತದೆಎAದುವಿದ್ಯಾರ್ಥಿಗಳಿಗೆಪ್ರೇರಣೆನೀಡಿದರು. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕೃತಿ, ಆಚಾರ–ವಿಚಾರಹಾಗೂಮೌಲ್ಯಗಳನ್ನುಬೆಳೆಸಲುಇಂತಹ ವಿಚಾರ ಸಂಕಿರಣಗಳು ಅನಿವಾರ್ಯಎಂದು ತಿಳಿಸುತ್ತಾ, ರಾಮಕೃಷ್ಣ ಮಠ ಮತ್ತು ಮಿಷನ್‌ನ ವಿವಿಧ ಸೇವಾ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿಯಶಸ್ಸನ್ನು ಸಾಧಿಸುವುದರಜೊತೆಗೆಉತ್ತಮ ಸಮಾಜವನ್ನುಕಟ್ಟುವಲ್ಲಿತಮ್ಮ ಪಾತ್ರವನ್ನು ನಿರ್ವಹಿಸಬೇಕು”ಎಂದುಮAಗಳೂರಿನ ಎಂ. ಆರ್. ಜಿ. ಗ್ರೂಪ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದಡಾ. ಕೆ. ಪ್ರಕಾಶ್ ಶೆಟ್ಟಿಅವರುಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿನಡೆದ ಪ್ರಜ್ಞಾ – ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.೧೮೯೩ ರಲ್ಲಿಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ“ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದಉನ್ನತಿಯತ್ತ: ಚಾರಿತ್ರ‍್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ”ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣದಶಾಸಕರಾದÀಡಿ. ವೇದವ್ಯಾಸಕಾಮತ್‌ಅವರು ಮಾತನಾಡಿ“ನಮ್ಮ ಹಿರಿಯರ ಬಳಿ ಅಕ್ಷರಜ್ಞಾನಇಲ್ಲದಿದ್ದರೂ, ಸಾಕ್ಷರತೆ ಮತ್ತುಜೀವನಾನುಭವದಜ್ಞಾನವಿತ್ತು. ಅದರಿಂದಅವರುಜೀವನದಲ್ಲಿ ಹಲವು ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಅಗತ್ಯ ಸೌಲಭ್ಯಗಳು ಹಾಗೂ ಅನೇಕ ಅವಕಾಶಗಳಿವೆ. ಆದ್ದರಿಂದ ಅವುಗಳ ಸದುಪಯೋಗ ಪಡೆದುಕೊಂಡುಜೀವನದಲ್ಲಿಯಶಸ್ಸು ಸಾಧಿಸುವಗುಣವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಕೆಲಸ ಎಷ್ಟೇ ಸಣ್ಣದಾಗಿರಲಿ, ಅದನ್ನುಇಷ್ಟಪಟ್ಟು ಮತ್ತು ಶ್ರದ್ಧೆಯಿಂದ ಮಾಡಿ. ನಿಮ್ಮ ಮನಸ್ಸು ಸದಾ ಸ್ವಚ್ಛವಾಗಿರಲಿ. ಸ್ವಚ್ಛವಾದ ಮನಸ್ಸಿನಿಂದಲೇ ಸ್ವಚ್ಛವಾದ ಸಮಾಜ ಮತ್ತುದೇಶವನ್ನು ನಿರ್ಮಿಸಲು ಸಾಧ್ಯ. ಇಂತಹ ವಿಚಾರ ಸಂಕಿರಣಗಳ ಜೊತೆಗೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅವರೊಂದಿಗೆ ನೇರವಾಗಿ ಸಂವಹನ ನಡೆಸುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಬೇಕು. ಈ ನಿಟ್ಟಿನಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ. ನಾನೂ ರಾಮಕೃಷ್ಣ ಮಠದೊಂದಿಗೆ ಕೈಜೋಡಿಸಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಅಗತ್ಯವಾದ ಪರಿಹಾರ ಮತ್ತು ಸಹಕಾರವನ್ನುಒದಗಿಸಲು ಪ್ರಯತ್ನಿಸುತ್ತೇನೆ.”ಎಂದು ಹೇಳಿದರು.

ವಿಶೇಷ ಅವಧಿಗಳು ಹಾಗೂ ಸಂವಾದ
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರುರಾಮಕೃಷ್ಣಆಶ್ರಮದ ಪೂಜ್ಯ ಸ್ವಾಮಿಯುಕ್ತೇಶಾನಂದಜಿ ಮೊದಲ ಅವಧಿಯನ್ನುನಡೆಸಿಕೊಟ್ಟರು. ಎರಡನೇಅವಧಿಯಲ್ಲಿಮುಕುಂದ್‌ರಿಯಾಲಿಟಿ ಹಾಗೂ ವರ್ಟೆಕ್ಸ್ ಮ್ಯಾನೇಜ್ಡ್ ನ ವ್ಯವಸ್ಥಾಪಕ ಪಾಲುದಾರರಾದಗುರುದತ್ತ ಶೆಣೈಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ“ಪದವಿ ಒಂದುಆರAಭ; ಕೌಶಲ್ಯ, ಮನೋಭಾವ ಮತ್ತು ಸೇವೆಯೇಅರ್ಥಪೂರ್ಣ ವೃತ್ತಿಜೀವನದದಾರಿ” ಎಂಬ ವಿಷಯದಕುರಿತಾಗಿ ನಡೆದ ಸಂವಾದದಲ್ಲಿಮAಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್‌ಮೆಂಟ್‌ಅAಡ್‌ರಿಸರ್ಚ್ನ ಕಾರ್ಯನಿರ್ವಾಹಕ ನಿರ್ದೇಶಕರಾದಡಾ. ರೋನಾಲ್ಡ್ ಸಿಕ್ವೇರಾ, ಮಂಗಳೂರಿನ ಕ್ಲಿನಿಕಲ್ ಸೈಕಾಲಜಿಸ್ಟ್ಡಾ. ಕೆ. ಟಿ. ಶ್ವೇತಾ, ಹಾಗೂ ಬೆಂಗಳೂರಿನಅಮೆಜಾನ್‌ಡೆವಲಪ್‌ಮೆAಟ್ ಸೆಂಟರ್‌ನರಿಸ್ಕ್ ಇನ್ವೆಸ್ಟಿಗೇಷನ್ಸ್ವಿಭಾಗದ ಪ್ರಬಂಧಕರಾದದೀಪಕ್‌ರಾಜ್‌ಭಾಗವಹಿಸಿದರು. ಇನ್ಫಿನುಯಿ ನಾಲೆಡ್ಜ್ ಹಬ್ ನ ನಿರ್ದೇಶಕ ಹಾಗೂ ಸಹ ಸಂಸ್ಥಾಪಕರಾದ ವೈಶಾಖ್ ಕೆ. ಪಿ. ಸಂವಾದಕಾರ್ಯಕ್ರಮ ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತಯೋಧರಾದಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಸ್ವಾಗತಿಸಿ, ಭಾರತೀಯ ಸೇನೆಯ ನಿವೃತ್ತಯೋಧರಾದ ಬೆಳ್ಳಾಲ ಗೋಪಿನಾಥ್‌ರಾವ್‌ವಂದಿಸಿದರು. ರೆಜಿನಾ ದಿನೇಶ್‌ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿಮಂಗಳಾ ಕಾಲೇಜ್‌ಆಫ್ ಪ್ಯಾರಾಮೆಡಿಕಲ್ ಸೈನ್ಸಸ್, ಮಂಗಳೂರು; ಎ.ಜೆ. ಇನ್‌ಸ್ಟಿಟ್ಯೂಟ್ ಆಫ್‌ಎಂಜಿನಿಯರಿAಗ್‌ಅAಡ್ ಮ್ಯಾನೇಜ್‌ಮೆಂಟ್, ಮಂಗಳೂರು; ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿ, ವಳಚ್ಚಿಲ್; ಕೆನರಾಕಾಲೇಜ್‌ಆಫ್‌ಎಂಜಿನಿಯರಿAಗ್, ಬೆಂಜನಪದವು; ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್‌ಎಂಜಿನಿಯರಿAಗ್‌ಅAಡ್‌ಟೆಕ್ನಾಲಜಿ, ಮೂಡುಬಿದಿರೆ; ಸಹ್ಯಾದ್ರಿಕಾಲೇಜ್‌ಆಫ್‌ಎಂಜಿನಿಯರಿAಗ್‌ಅAಡ್ ಮ್ಯಾನೇಜ್‌ಮೆಂಟ್, ಅಡ್ಯಾರ್; ಸೇಂಟ್ ಅಲೋಶಿಯಸ್ (ಡೀಮ್ಡ್ಟು ಬಿ ಯೂನಿವರ್ಸಿಟಿ), ಸ್ಕೂಲ್‌ಆಫ್ ಲಾ, ಮಂಗಳೂರು; ಸಿಟಿ ಕಾಲೇಜ್‌ಆಫ್ ನರ್ಸಿಂಗ್, ಮಂಗಳೂರು ಹಾಗೂ ಶ್ರೀನಿವಾಸ್‌ಯೂನಿವರ್ಸಿಟಿ, ಇನ್‌ಸ್ಟಿಟ್ಯೂಟ್ ಆಫ್‌ಎಂಜಿನಿಯರಿAಗ್‌ಅAಡ್‌ಟೆಕ್ನಾಲಜಿ,ಮುಕ್ಕ ನ ೭೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.