ಗಣಪತಿ ಬಿರಿಯಾನಿ ತಿನ್ನುವ ಪೋಸ್ಟರ್: ರೆಸ್ಟೋರೆಂಟ್ ಮಾಲೀಕ ಬಂಧನ

0
38

ತಿರುನಲ್ವೇಲಿ: ರೆಸ್ಟೋರೆಂಟ್‌ವೊಂದರ ಹೊರಭಾಗದಲ್ಲಿ ಗಣಪತಿ ದೇವರು ಬಿರಿಯಾನಿ ತಿನ್ನುತ್ತಿರುವಂತೆ ಚಿತ್ರಿಸಿರುವ ಪೋಸ್ಟರ್ ಅಳವಡಿಸಿದ್ದ ಆರೋಪದ ಮೇರೆಗೆ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ.

ಬಂಧಿತನನ್ನು ಜಯಂತ್ (30) ಎಂದು ಗುರುತಿಸಲಾಗಿದೆ. ಈ ಕುರಿತು ಸೆಲ್ವರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪೋಸ್ಟರ್‌ನಲ್ಲಿ ಹಿಂದೂ ದೇವರನ್ನು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಬಿರಿಯಾನಿ ಅಂಗಡಿಯ ಮುಂಭಾಗದಲ್ಲಿ ಗಣಪತಿ ದೇವರು ಬಿರಿಯಾನಿ ಸೇವಿಸುತ್ತಿರುವಂತೆ ಚಿತ್ರಿಸಿರುವ ಪೋಸ್ಟರ್‌ನ್ನು ಅಳವಡಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.