ಯಶಸ್ವಿಯಾದ ಶ್ರೀ ಗಾಯತ್ರಿ ಸಾಮೂಹಿಕ ಪೂಜೆ ಮತ್ತು ಉಪಾಸನೆ

0
4

ದಾವಣಗೆರೆ : ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 26 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ನೂಲು ಪೂರ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಪರಿವಾರದ ಗೌರವ ಅಧ್ಯಕ್ಷರಾದ ಡಾ|| ಸುಶೀಲಮ್ಮ ಮತ್ತು ಕುಟುಂಬ, ಸವಿತಾ ವಿಜಯ ಕೂಲಂಬಿ ಮತ್ತು ಕುಟುಂಬ ಪೂಜೆ ಸಲ್ಲಿಸಿದರು. ಈ ಸಮಾರಂಭದಲ್ಲಿ ರಾಖಿ ಹಬ್ಬದ ಪರವಾಗಿ ಎಲ್ಲಾ ಅಣ್ಣ-ತಮ್ಮಂದಿರಿಗೆ ರಕ್ಷಾ ಬಂಧನ ಪ್ರಯುಕ್ತ ಸವಿತಾ ವಿಜಯ ಕೂಲಂಬಿ ರಾಖಿ ಕಟ್ಟಿ ಸಿಹಿ ಹಂಚಿ ಗೌರವ ಸಮರ್ಪಿಸಿದರು.

ಈ ಆಧ್ಯಾತ್ಮಿಕ ಪರಂಪರೆಯಲ್ಲಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್, ಕೆ.ಹೆಚ್. ಮಂಜುನಾಥ್, ಸತೀಶ್ ಆರ್.ಎಂ., ವಿ.ಕೃಷ್ಣಮೂರ್ತಿ, ಸತ್ಯನಾರಾಯಣ ಮೂರ್ತಿ, ಎಂ.ಎಸ್.ಪ್ರಸಾದ್, ನಾಗ ರಾಜ್, ಪ್ರೇಮಾ ಮಹೇಶ್ವರಯ್ಯ, ಸ್ರೀಮತಿಮುಕ್ತಾ ಶ್ರೀನಿವಾಸ ಪ್ರಭು, ಆರ್.ಜಿ.ಮೃತ್ಯುಂಜಯ, ಶಿವಕುಮಾರ್, ಕುಮಾರಿ ರಿಷಿಕಾ ಕೂಲಂಬಿ ಮುಂತಾದವರು ಉಪಸ್ಥಿತರಿದ್ದರು.