ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವಂಡ್ಸೆ ಪ್ರತಿಷ್ಠಾ ವರ್ಧಂತಿ, ಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರೆಯು ಫೆ. 20 2026 ಶುಕ್ರವಾರ ವೇ. ಮೂ. ಶಾರ್ಕೆ ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿತು.
ಫೆ. 20 ರಂದು ಮಧ್ಯಾಹ್ನ 2.30 ರಿಂದ ಸುಧನ್ವಾರ್ಜುನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ನಡೆಯಿತು. ತಾಳ ಮದ್ದಳೆಯಲ್ಲಿ ಭಾಗವತರಾಗಿ ಕಾವ್ಯಶ್ರೀ ಅಜೇರು, ಮದ್ದಳೆ : ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚೆಂಡೆ: ಸತ್ಯಜಿತ್ ರಾಯಿ ಅರ್ಥದಾರಿಗಳು: ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪ್ರೊ ಪವನ್ ಕಿರಣ್ ಕೆರೆ ಸದಾಶಿವ ಆಳ್ವ ತಲಪಾಡಿ ಭಾಗವಹಿಸಿದ್ದರು.

