ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ಆಯ್ಕೆ

0
3

ಮಂಗಳೂರು : ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿ (ರಿ.) ಇದರ 2025-26ನೇ ಸಾಲಿನ ಲೆಕ್ಕಪತ್ರ ಮಂಡನೆ ಹಾಗೂ ವಾರ್ಷಿಕ ಸಭೆಯು ಅಕ್ಟೋಬರ್ 25ರ ಭಾನುವಾರ ನಡೆಯಿತು. ಸಭೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸಮಿತಿಯ ಅಧ್ಯಕ್ಷ ನಿತಿನ್ ಕಣ್ಣೂರು ಅವರು 48ನೇ ವರ್ಷದ ಗಣೇಶೋತ್ಸವವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲ ಸದಸ್ಯರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ನೂತನ ಸಮಿತಿ ರಚನೆಗೆ ಸಭೆಯ ಅನುಮೋದನೆ ಪಡೆಯಲಾಯಿತು. ನೂತನ ಸಮಿತಿ ರಚನೆಯ ಪ್ರಕ್ರಿಯೆಗೆ ಮೋನಪ್ಪ ಬಿ. ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ನೂತನ ಸಮಿತಿಯ ಪದಾಧಿಕಾರಿಗಳು

  • ಗೌರವಾಧ್ಯಕ್ಷರು: ರಾಮಚಂದ್ರ ಕಣ್ಣೂರು
  • ಅಧ್ಯಕ್ಷರು: ಸುಧೀರ್ ಶೆಟ್ಟಿ ಕಣ್ಣೂರು
  • ಉಪಾಧ್ಯಕ್ಷರು: ಯುವರಾಜ್ ಸುವರ್ಣ, ಸುರೇಶ್ ಪೂಜಾರಿ ಕಣ್ಣೂರು
  • ಪ್ರಧಾನ ಕಾರ್ಯದರ್ಶಿ: ನಿತಿನ್ ಕಣ್ಣೂರು
  • ಜೊತೆ ಕಾರ್ಯದರ್ಶಿಗಳು: ದೀಪಕ್ ಅಮೀನ್, ಅಮನ್ ಅಂಚನ್
  • ಸಂಘಟನಾ ಕಾರ್ಯದರ್ಶಿಗಳು: ಸುಧಾಕರ ಆಚಾರ್ಯ, ನಾಗೇಶ್ ಕೋಟ್ಯಾನ್
  • ಕ್ರೀಡಾ ಕಾರ್ಯದರ್ಶಿಗಳು: ಶ್ರೇಯಸ್ ಅಂಚನ್, ರಾಜೇಶ್ ಕೋಟ್ಯಾನ್
  • ಮಾಧ್ಯಮ ಸಂಚಾಲಕರು: ಸಚಿನ್ ಶೆಟ್ಟಿ, ಅರ್ಪಿತ್ ಶೆಟ್ಟಿ

ನೂತನ ಅಧ್ಯಕ್ಷ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿ, ನೂತನ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಿತಿಯ 50ನೇ ವರ್ಷದ ಗಣೇಶೋತ್ಸವದವರೆಗೆ ಪ್ರತಿ ತಿಂಗಳು ಸಾಮಾಜಿಕ, ಧಾರ್ಮಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ರೂಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು.

ಸಮಿತಿಯ ವತಿಯಿಂದ ಮುಂದಿನ ದಿನಗಳಲ್ಲಿ ಧಾರ್ಮಿಕ ಚಟುವಟಿಕೆಗಳ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ನಿಖಿತ್ ಕೊಟ್ಟಾರಿ ಕಣ್ಣೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.