
ಸುಳ್ಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗ 17ರ ವಯೋಮಾನದ ಬಾಲಕ ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳ ತೆಕ್ಕೆಗೆ ಹಲವು ಪದಕ
ಜಾಲ್ಸೂರು : ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಸರ್ಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ಮತ್ತು ಸರ್ಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆ ಸೋಣಂಗೇರಿ ಇದರ ಸಹಯೋಗದೊಂದಿಗೆ ಸುಳ್ಯ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ 17ರ ವಯೋಮಾನದ ಬಾಲಕರು ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ತಂಡ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದ್ದಾರೆ.
17ರ ವಯೋಮಾನದ ಬಾಲಕ ವಿಭಾಗದಲ್ಲಿ ಅನ್ವೀಶ್ 400 ಮೀ ಓಟ ಪ್ರಥಮ,400 ಮೀ ಹರ್ಡಲ್ಸ್ ಪ್ರಥಮ, 4×400 ಮೀ ರಿಲೇ ಪ್ರಥಮ, 4×100 ಮೀ ರಿಲೇ ತೃತೀಯ ಸ್ಥಾನ . ಶಮೀತ್ ಜಿ.ಜೆ ಹೈ ಜಂಪ್ ಪ್ರಥಮ, ಟ್ರಿಪಲ್ ಜಂಪ್ ತೃತೀಯ ಸ್ಥಾನ . ದೀಪಕ್ ಲಾಂಗ್ ಜಂಪ್ ಪ್ರಥಮ, 4×400 ಮೀ ರಿಲೇ ಪ್ರಥಮ, 400 ಮೀ ಹರ್ಡಲ್ಸ್ ದ್ವಿತೀಯ,ಹೈ ಜಂಪ್ ತೃತೀಯ ಸ್ಥಾನ. ಲೋಹಿತ್ ಕುಮಾರ್ ಎಸ್, 3000 ಮೀ ದ್ವಿತೀಯ,ವಾಕ್ ರೇಸ್ ದ್ವಿತೀಯ, 4×400 ಮೀ ರಿಲೇ ಪ್ರಥಮ,4×100 ಮೀ ರಿಲೇ ತೃತೀಯ ಸ್ಥಾನ. ಮನ್ವಿತ್ ಕೆ. ಆರ್ 200 ಮೀ ಓಟ ತೃತೀಯ, 4×100 ಮೀ ರಿಲೇ ತೃತೀಯ ಸ್ಥಾನ, ತರುಣ್ ರಾಜ್ ಜಾವೆಲಿನ್ ತೃತೀಯ, 4×100 ಮೀ ತೃತೀಯ ಸ್ಥಾನ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ ಟ್ರಿಪಲ್ ಜಂಪ್ ಪ್ರಥಮ, 400 ಮೀ ಓಟ ಪ್ರಥಮ, ಲಾಂಗ್ ಜಂಪ್ ತೃತೀಯ, 4×400 ರಿಲೇ ಪ್ರಥಮ ಸ್ಥಾನ. ಹೇಮನ್ಯ ಟಿ.ಕೆ 800 ಮೀ ಓಟ ಪ್ರಥಮ,4×400 ಮೀ ರಿಲೇ ಪ್ರಥಮ ಸ್ಥಾನ. ದೀಕ್ಷಿತಾ ಎಚ್ 4×400 ಮೀ ರಿಲೇ ಪ್ರಥಮ ಸ್ಥಾನ. ವೈಷ್ಣವಿ ಸಿ. ರಾವ್ 4×400 ಮೀ ರಿಲೇ ಪ್ರಥಮ ಸ್ಥಾನ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿನಂದನ್ 200 ಮೀ ಓಟ ಪ್ರಥಮ, 600 ಮೀ ಓಟ ದ್ವಿತೀಯ ಸ್ಥಾನ, ಆಶಿಶ್ ಪಿ. ಜೆ ಡಿಸ್ಕಸ್ ಎಸೆತಾ ದ್ವಿತೀಯ ಸ್ಥಾನ ಪಡೆದು ಪದಕ ಜೊತೆಗೆ ಪ್ರಶಸ್ತಿ ಪತ್ರ ತನ್ನದಾಗಿಸಿಗೊಂಡಿದ್ದಾರೆ.
ತರಬೇತುದಾರರಾದ ಶ್ರೀಮತಿ ಸುಮಿತಾ ಹಾಗೂ ಪ್ರಶಸ್ತಿ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗು ಆಡಳಿತ ಮಂಡಳಿ, ಪೋಷಕ ವೃಂದ,ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.
