ಸುರತ್ಕಲ್ : ಕುತ್ತೆತ್ತೂರು ಸೂರಿಂಜೆ ಶಿಬರೂರು ಕೈಯೂರು ಪಂಜ ಸೂರಿಂಜೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿಯನ್ನು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಚಿಸಲಾಯಿತು .
ಹಯವದನ ಭಟ್ ಕೈಯೂರು, ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ,ರಾಜೇಂದ್ರ ಶೆಟ್ಟಿ ಕುಡ್ತಿಮಾರ್ ಗುತ್ತು,ನಾರಾಯಣ ಶೆಟ್ಟಿ ಬ್ರಹ್ಮಸ್ಥಾನ,ಜಗನ್ನಾಥ ಶೆಟ್ಟಿ ತೇವು ಸೂರಿಂಜೆ, ಅನಿಲ್ ಶೆಟ್ಟಿ ತೇವು ಸೂರಿಂಜೆ,ಮನೋಹರ ಶೆಟ್ಟಿ ಸೂರಿಂಜೆ ಉಪಸ್ಥಿತರಿದ್ದರು .
ಸಮಿತಿಗೆ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ರಾಜೇಂದ್ರ ಶೆಟ್ಟಿ ಕುಡ್ತಿಮಾರ್ ಗುತ್ರು,ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಬೊಳ್ಳಾರುಗುತ್ತು ಸೂರಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಸೂರಿಂಜೆ, ಕೋಶಾಧಿಕಾರಿಯಾಗಿ ಸುಜೀರ್ ಶೆಟ್ಟಿ ಸೂರಿಂಜೆ ಅಯ್ಕೆಯಾದರು.
ಪಂಚ ದೈವಗಳ ನೇಮೋತ್ಸವವನ್ನು ಎಪ್ರಿಲ್ 3 ತಾರೀಖಿನಿಂದ ಎಪ್ರಿಲ್ 7 ರವರೆಗೆ ಜರಗಿಸಲು ತೀರ್ಮಾನಿಸಲಾಯಿತು.

