ಭಾರತಕ್ಕೆ ವಿಶೇಷ ಪ್ರಿವಿಲೇಜ್ ಗಳು ಮತ್ತು ಉಳಿತಾಯದ ಹೆಬ್ಬಾಗಿಲಿನ ಮೂಲಕ ಪುರಸ್ಕಾರ
ಮುಂಬೈ, ಮಾರ್ಚ್ 27, 2025: ಟಾಟಾ ನಿಯು ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಗಮನಾರ್ಹ ಮೈಲಿಗಲ್ಲು ಪ್ರಕಟಿಸಿವೆ: ಟಾಟಾ ನಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿತರಿಸಲಾದ 2 ಮಿಲಿಯನ್ ಕಾರ್ಡ್ ಗಳನ್ನು ಮೀರಿದ್ದ ಭಾರತದ ಆದ್ಯತೆಯ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಕ್ರೋಢೀಕರಿಸಿಕೊಂಡಿದೆ. ಈ ಸಾಧನೆಯು ದೇಶಾದ್ಯಂತ ಗ್ರಾಹಕರಿಗೆ ಮೌಲ್ಯ ಮತ್ತು ತಡೆಯಿರದ ರಿವಾರ್ಡ್ಸ್ ಇಕೊಸಿಸ್ಟಂ ಪೂರೈಸುವಲ್ಲಿ ಕಾರ್ಡ್ ಯಶಸ್ಸು ತೋರಿದೆ.
ಆಗಸ್ಟ್ 2022ರಲ್ಲಿ ಇದು ಬಿಡುಗಡೆಯಾದ ದಿನದಿಂದಲೂ ಟಾಟಾ ನಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಮನಾರ್ಹ ದಾಪುಗಾಲು ಇರಿಸಿದ್ದು ಭಾರತದ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಅತ್ಯಂತ ಸರಳ ಮತ್ತು ಪಾರದರ್ಶಕ ರಿವಾರ್ಡ್ಸ್ ಇಕೊಸಿಸ್ಟಂ ಬಳಕೆದಾರರ ಪ್ರೀತಿಗೆ ಒಳಗಾಗಿದೆ. ಹೊಸ ಕಾರ್ಡ್ ಗಳ ವಿತರಣೆಯ (ಕ್ಯೂ3 ಎಫ್.ವೈ.25ರಲ್ಲಿ ಶೇ.13ಕ್ಕಿಂತ ನಿವ್ವಳ ಹೊಸ ಕಾರ್ಡ್ ಗಳನ್ನು ಮೀರಿ- ಆರ್.ಬಿ.ಐ.) ಇದು ದೇಶಾದ್ಯಂತ ಗ್ರಾಹಕರ ನಂಬಿಕೆ ಮತ್ತು ನಿಷ್ಠೆಯನ್ನು ತೀವ್ರವಾಗಿ ಗಳಿಸಿದೆ.
ಪ್ರಮುಖಾಂಶಗಳು:
• 2 ಮಿಲಿಯನ್ ಕಾರ್ಡ್ ಗಳನ್ನು ವಿತರಿಸಲಾಗಿದೆ: ಸದೃಢ ಮಾರುಕಟ್ಟೆ ಅನುಮೋದನೆ ಮತ್ತು ಗ್ರಾಹಕರ ಆದ್ಯತೆ ನಿರೂಪಿಸಿದೆ.
• ಶೇ.13+ ಮಾರುಕಟ್ಟೆ ಪಾಲು: ಕ್ಯೂ3 ಎಫ್.ವೈ.25ರಲ್ಲಿ ಶೇ.13ರಷ್ಟು ನಿವ್ವಳ ಹೊಸ ಕಾರ್ಡ್ ಗಳನ್ನು ವಿತರಿಸುವ (ಆರ್.ಬಿ.ಐ. ದತ್ತಾಂಶದ ಪ್ರಕಾರ)ಮೂಲಕ ಆಕ್ರಮಿಸಿದೆ, ಇದು ಭಾರತದಲ್ಲಿ ಯಾವುದೇ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಗೆ ಅತ್ಯಂತ ಹೆಚ್ಚಿನದಾಗಿದೆ.
• ಯೂನಿಫೈಡ್ ರಿವಾರ್ಡ್ಸ್ ಇಕೊಸಿಸ್ಟಂ: ದಿನಸಿಗಳು, ಔಷಧಗಳು, ಬಿಲ್ ಪಾವತಿಗಳು, ಯುಪಿಐ, ಗಿಫ್ಟ್ ಕಾರ್ಡ್ ಗಳು ಮತ್ತು ಹಣಕಾಸು ಸೇವೆಗಳಂತಹ ದೈನಂದಿನ ಅಗತ್ಯಗಳಿಂದ ಜೀವನಶೈಲಿ ಕೇಂದ್ರಿತ ಕೊಡುಗೆಗಳಾದ ಫ್ಯಾಷನ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಟ್ರಾವೆಲ್ ಮತ್ತು ಮನರಂಜನೆಯವರೆಗೆ ಹೊಂದಿವೆ.
• ಉನ್ನತ ಸಕ್ರಿಯತೆ: ಯುಪಿಐ ವಿಶೇಷತೆಯು ಪ್ರಮುಖ ಯಶಸ್ಸಾಗಿದ್ದು, 12 ಮಿಲಿಯನ್+ ವಹಿವಾಟುಗಳನ್ನು ಒಂದು ತಿಂಗಳಲ್ಲಿ ನಡೆಸುವ ಹೆಚ್ಚಿನ ರನ್-ರೇಟ್ ಹೊಂದಿದ್ದು ಇದು ಯುಪಿಐನಲ್ಲಿ ಖರ್ಚು ರೂ.800 ಕೋಟಿಗೂ ಹೆಚ್ಚಿದೆ.
• ಪ್ರಮುಖ ಖರ್ಚಿನ ವಿಭಾಗಗಳು: ದಿನಸಿ, ಇಂಧನ ಮತ್ತು ಯುಟಿಲಿಟಿಗಳು ಪ್ರಮುಖ ವ್ಯಯಿಸುವ ವಿಭಾಗಗಳನ್ನು ಹೊಂದಿದ್ದು, ಬಹುತೇಕ ಒಟ್ಟು ವ್ಯಯಿಸಿದ್ದರಲ್ಲಿ ಶೇ.30 ಪ್ರತಿನಿಧಿಸುತ್ತದೆ, ಇದು ಗ್ರಾಹಕರ ಪ್ರತಿನಿತ್ಯದ ಅಗತ್ಯಗಳನ್ನು ಪೂರೈಸುವ ಗ್ರಾಹಕರಿಗೆ ಟಾಪ್-ಆಫ್-ದಿ ವ್ಯಾಲೆಟ್ ಕಾರ್ಡ್ ಆಗಿರುವುದನ್ನು ಎತ್ತಿ ತೋರಿಸಿದೆ.
• ವೈವಿಧ್ಯಮಯ ಗ್ರಾಹಕ ವಲಯಗಳು: ನಿಯುಕಾರ್ಡ್ ಹೊಸ ಬ್ಯಾಂಕ್ ಗ್ರಾಹಕರಿಗೆ ನಿಶ್ಚಿತ ಠೇವಣಿಗೂ ನೀಡಲಾಗುತ್ತದೆ. ಸಮಗ್ರ ಡಿಜಿಟಲ್ ಪ್ರಯಾಣವು ವಿದ್ಯಾರ್ಥಿಗಳು, ನಿವೃತ್ತರು, ಗೃಹಿಣಿಯರು ಮತ್ತು ಸ್ವಯಂ-ಉದ್ಯೋಗಿ ವಲಯಗಳಿಗೆ ಪೂರೈಸುತ್ತದೆ.
• ಹೆಚ್ಚಿನ ಮೌಲ್ಯದ ಖರ್ಚುಗಳು: ಸಾಮಾನ್ಯವಾಗಿ ಹೆಚ್ಚಿನ ಖರ್ಚುಗಳು ಎಲೆಕ್ಟ್ರಾನಿಕ್ಸ್ ಮತ್ತು ಆಭರಣ ವಿಭಾಗಗಳಲ್ಲಿರುತ್ತವೆ, ನಿಯು ಕಾರ್ಡ್ ಗಳು ಸದೃಢ ಮೌಲ್ಯ ಪ್ರತಿಪಾದನೆಯನ್ನು ಹಾಗೂ ಗ್ರಾಹಕರಿಗೆ ಇಷ್ಟವಾಗುತ್ತವೆ.
• ಸದೃಢ ಡಿಜಿಟಲ್ ಅಳವಡಿಕೆ: ತಡೆರಹಿತ ಡಿಜಿಟಲ್ ಆನ್ ಬೋರ್ಡಿಂಗ್, ತಕ್ಷಣ ಅನುಮೋದನೆಗಳು ಮತ್ತು ಸಂಪರ್ಕರಹಿತ ವಹಿವಾಟುಗಳು ಆಧುನಿಕ ಡಿಜಿಟಲ್ ಜೀವನಶೈಲಿಗಳಿಗೆ ಪೂರೈಸುತ್ತವೆ.
• ದೇಶವ್ಯಾಪಿ ತಲುಪುವಿಕೆ: ಮೆಟ್ರೋಪಾಲಿಟನ್ ಮತ್ತು ಸಣ್ಣ ನಗರಗಳಲ್ಲಿ ಸದೃಢ ಅಳವಡಿಕೆಯು ಅದರ ವಿಸ್ತಾರ ಅನುಮೋದನೆ ಬಿಂಬಿಸುತ್ತದೆ.
“ಟಾಟಾ ಡಿಜಿಟಲ್ ನಲ್ಲಿ ನಾವು ಕ್ರೆಡಿಟ್ ಕಾರ್ಡ್ ಅನುಭವವನ್ನು ಕ್ರಾಂತಿಕಾರಕಗೊಳಿಸಲು ಬದ್ಧವಾಗಿದ್ದು ಅನುಕೂಲಗಳನ್ನು ನಮ್ಮ ಗ್ರಾಹಕರಿಗೆ ಹೆಚ್ಚು ಪುರಸ್ಕಾರಯುತ ಮತ್ತು ಪಾರದರ್ಶಕವಾಗಿಸಿದ್ದೇವೆ” ಎಂದು ಟಾಟಾ ಡಿಜಿಟಲ್ ಫೈನಾನ್ಷಿಯಲ್ ಸರ್ವೀಸಸ್ ನ ಚೀಫ್ ಬಿಸಿನೆಸ್ ಆಫೀಸರ್ ಗೌರವ್ ಹಜ್ರತಿ ಹೇಳಿದರು. “2 ಮಿಲಿಯನ್ ಟಾಟಾ ನಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳ ವಿತರಣೆ ಮೀರಿರುವುದು ನಮ್ಮ ಗ್ರಾಹಕರು ನಿಯು ಕಾರ್ಡ್ ಮೇಲೆ ಇರಿಸಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಾವು ಸತತವಾಗಿ ನಿಯುಕಾರ್ಡ್ ಅನುಭವ ಉನ್ನತೀಕರಿಸಲು ಬದ್ಧವಾಗಿದ್ದು ನಿಯುಕಾರ್ಡ್ ಹೊಂದಿರುವ ನಮ್ಮ ಬೆಳೆಯುತ್ತಿರುವ ಸಮುದಾಯಕ್ಕೆ ಮತ್ತಷ್ಟು ಮಹತ್ತರ ಮೌಲ್ಯ ಪೂರೈಸುತ್ತೇವೆ” ಎಂದರು.
ಟಾಟಾ ನಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ ಪ್ರತಿ ವಹಿವಾಟು ಕೂಡಾ ರಿವಾರ್ಡ್ ಗಳ ಜಗತ್ತನ್ನು ಅನಾವರಣಗೊಳಿಸುತ್ತದೆ, ಅದರಲ್ಲಿ ಶೇ.10 ಉಳಿತಾಯ, ಹೆಚ್ಚಿಸಲಾದ ನಿಯೊಕಾಯಿನ್ ಗಳಿಕೆಗಳು ಮತ್ತು ಪ್ರಯಾಣ, ಫ್ಯಾಷನ್, ಎಲೆಕ್ಟ್ರಾನಿಕ್ಸ್, ದಿನಸಿ ಮತ್ತಿತರವುಗಳಲ್ಲಿ ವಿಶೇಷ ಪ್ರಿವಿಲೇಜ್ ಗಳನ್ನು ಒಳಗೊಂಡಿದೆ. ಈ ಕಾರ್ಡ್ ನ ತಡೆರಹಿತ, ತಂತ್ರಜ್ಞಾನ ಪ್ರೇರಿತ ಅನುಭವದಲ್ಲಿ ಡಿಜಿಟಲ್ ಆನ್ ಬೋರ್ಡಿಂಗ್, ತಕ್ಷಣದ ಅನುಮೋದನೆಗಳು ಮತ್ತು ಸಂಪರ್ಕರಹಿತ ಪಾವತಿಗಳನ್ನು ಒಳಗೊಂಡಿದ್ದು ಆಧುನಿಕ, ಡಿಜಿಟಲ್ ಜೀವನಶೈಲಿಗೆ ಪೂರೈಸುತ್ತದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಪೇಮೆಂಟ್ಸ್, ಲಯಬಿಲಿಟಿ ಪ್ರಾಡಕ್ಟ್ಸ್, ಕನ್ಸೂಮರ್ ಫೈನಾನ್ಸ್ ಅಂಡ್ ಮಾರ್ಕೆಟಿಂಗ್ ನ ಕಂಟ್ರಿ ಹೆಡ್ ಶ್ರೀ ಪರಾಗ್ ರಾವ್, “ಭಾರತದ ಮುಂಚೂಣಿಯ ಕಾರ್ಡ್ ಮಾಲೀಕರಾಗಿ ಪ್ರತಿ ಗ್ರಾಹಕ ವಲಯಕ್ಕೂ ಕಸ್ಟಮೈಸ್ ಮಾಡಲಾದ ಕೊಡುಗೆಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದ್ದು, ಅತ್ಯುತ್ತಮ ಪಾವತಿಯ ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ನಾವು ಟಾಟಾ ನಿಯು ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ತನ್ನ ಡಿಜಿಟಲ್ ಪ್ರಥಮ ವಿಧಾನದಿಂದ ಮತ್ತು ಸದೃಢ ಮೌಲ್ಯ ಪ್ರತಿಪಾದನೆಯಿಂದ ಬಳಕೆದಾರರ ಅನುಭವ ಹೆಚ್ಚಿಸಲು ಮತ್ತು ಪ್ರತಿನಿತ್ಯದ ಖರ್ಚನ್ನು ಪುರಸ್ಕಾರಯುತ ಕ್ಷಣಗಳಾಗಿ ವ್ಯಯಿಸಲು ಶಕ್ತರಾಗಿದ್ದೇವೆ” ಎಂದರು.
ಕಾರ್ಡ್ ದಾರರು ಟಾಟಾ ನಿಯು ವೆಚ್ಚದ ಮೇಲೆ ನಾನ್-ಇಎಂಐ ವೆಚ್ಚಗಳನ್ನು ಶೇ.10ರವರೆಗೆ ನಿಯೊ ಕಾಯಿನ್ ಗಳಾಗಿ ಹಿಂದಿರುಗಿ ಪಡೆಯಬಹುದು ಮತ್ತು ಪಾಲುದಾರ ಟಾಟಾ ಬ್ರಾಂಡ್ ಗಳ ಮೇಲೆ (ಮಳಿಗೆಯ ಒಳಗೆ ಸೇರಿ) ನಿಯೊಕಾಯಿನ್ ಗಳನ್ನು ಶೇ.5ರಷ್ಟು ಪಡೆಯಬಹುದು, ನಾನ್-ಟಾಟಾ ಮತ್ತು ಮರ್ಚೆಂಟ್ ಇಎಂಐ ಖರ್ಚುಗಳ ಮೇಲೆ ಶೇ.1.5 ರಷ್ಟು ಹಿಂಪಡೆಯಲು ಅರ್ಹರಾಗುತ್ತಾರೆ ಮತ್ತು ಯುಪಿಐ ವಹಿವಾಟುಗಳ ಮೇಲೆ ಹೆಚ್ಚುವರಿ ರಿವಾರ್ಡ್ಸ್ ಪಡೆಯುತ್ತಾರೆ. ಕಾರ್ಡ್ ದಾರರಿಗೆ ಉಚಿತ ಸ್ಥಳೀಯ ವಿಮಾನ ನಿಲ್ದಾಣದ ಪ್ರವೇಶ ಮತ್ತು ಐ.ಎಚ್.ಸಿ.ಎಲ್. ಸಿಲ್ವರ್ ಸದಸ್ಯತ್ವವು ಕಾರ್ಡ್ ಇಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಟಾಟಾ ನಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ರುಪೇ ಮತ್ತು ವಿಸಾ ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು ಭಾರತದಾದ್ಯಂತ ಪ್ರೀಮಿಯಂ ಡಿಜಿಟಲ್ ಪಾವತಿಗಳು ಗ್ರಾಹಕರಿಗೆ ಲಭ್ಯ ಮತ್ತು ಪುರಸ್ಕಾರಯುತವಾಗಿಸಿದೆ.
ಟಾಟಾ ನಿಯು ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಮೈಲಿಗಲ್ಲಿನ ಸಂಭ್ರಮಾಚರಣೆ: 2 ಮಿಲಿಯನ್ ಗೂ ಹೆಚ್ಚು ಕಾರ್ಡ್ಗಳ ವಿತರಣೆ
RELATED ARTICLES