ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮ ಅಡಗಿದೆ : ಜಿ.ಕೆ. ಶೆಟ್ಟಿ

0
29

ಮಂಗಳೂರು : “ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ, ನೈತಿಕತೆ, ಕೌಶಲ್ಯ, ಶಿಸ್ತು ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದಲ್ಲಿಗೌರವಾನ್ವಿತ ವ್ಯಕ್ತಿಯಾಗಿರೂಪಿಸುವ ನೈಜ್ಯಅಕ್ಷರ ಶಿಲ್ಪಿಗಳು” ಎಂದು ನಗರದಕೆನರಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಹಾಗೂ ರೋಟರಿಜಿಲ್ಲಾ 3181 ರ ಆಡಳಿತ ಸಮಿತಿಯ ಕಾರ್ಯದರ್ಶಿಯವರಾದ ಗೋಪಾಲಕೃಷ್ಣ ಶೆಟ್ಟಿಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ರೋಟರಿಕ್ಲಬ್ ಮಂಗಳೂರು ಸಿಟಿ ಸಂಸ್ಥೆಯಆಶ್ರಯದಲ್ಲಿ ತಾ.10.09.2026 ರಂದು ನಗರದಈಡನ್‌ಕ್ಲಬ್ ಸಭಾಂಗಣದಲ್ಲಿಜರಗಿದ “ಶಿಕ್ಷಕರ ದಿನಾಚರಣೆ”ಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಸದಸ್ಯರನ್ನು, ಅತಿಥಿಗಳನ್ನು ಉದ್ದೇಶಿಸಿ ಮಾತಾನಾಡಿದರು.ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಮಾರ್ಗದರ್ಶನ ಪ್ರೋತ್ಸಾಹ ಮತ್ತು ಪರಿಶ್ರಮಅಡಗಿದೆಎಂದು ಮಾಹಿತಿ ನೀಡಿದರು.

ರೋಟರಿ ಸಂಸ್ಥೆಯ ವಲಯ ಸಹಾಯಕಗವರ್ನರ್‌ಡಾ| ಅರವಿಂದ್‌ಅವರುಗೌರವಅತಿಥಿಯಾಗಿ ಪಾಲ್ಗೊಂಡುಪ್ರಸ್ತಾವಿಕವಾಗಿ ಮಾತನಾಡಿ ಶುಭಾಶಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಲ್ಯ ಪದವು ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಯರಾದ ದಾಕ್ಷಾಯಿನಿ ಮತ್ತುಆದರ್ಶ ವಿದ್ಯಾನಿಲಯದ ಮುಖ್ಯೋಪಾಧ್ಯಾಯಿನಿಯಾದ ಸುಲೋಚನಿ ಯವರು ಶೈಕ್ಷಣಿಕಕ್ಷೇತ್ರದಲ್ಲಿ ಸಲ್ಲಿಸಿದ ಸುಧೀರ್ಘ, ಅನುಪಮ ಸೇವೆ ನೀಡಿದಕೊಡುಗೆ, ಸಾಧಿಸಿದ ಸಾಧೆನಯನ್ನು

ಪರಿಗಣಿಸಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ “ರಾಷ್ಟç ನಿರ್ಮಾತ ಪ್ರಶಸ್ತಿ”ಯನ್ನು ಪ್ರದಾನ ಮಾಡಿಅಭಿನಂದಿಸಲಾಯಿತು. ಮಂಗಳ ರೈ ಮತ್ತುಗಣೇಶ್‌ಅವರು ಪ್ರಶಸ್ತಿ ವಿಜೇತರ ಪರಿಚಯ ಸಾಧಿಸಿದ ಸಾಧನೆಗಳ ವಿವರ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸನಿತ್ ಶೇಟ್ ಸ್ವಾಗತಿಸಿ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಈ ದಿನ ನಮಗೆ ಶಿಕ್ಷಣ ಧಾರೆಯೆರೆದ ಗುರುಗಳಿಗೆ ವಂದನೆ ಮತ್ತುಕೃತಜ್ಞತೆ ಸಲ್ಲಿಸುವ ಪವಿತ್ರ ದಿನ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ನಿತಿನ್ ವರದಿ ಮಂಡಿಸಿ, ಬಳಿಕ ವಂದಿಸಿದರು.ವೇದಿಕೆಯಲ್ಲಿ ಸಂಸ್ಥೆಯಸ್ಥಾಪನಾ ಅಧ್ಯಕ್ಷಡಾ| ರಂಜನ್, ದಂಡಾಧಿಕಾರಿರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.