Thursday, May 1, 2025
HomeUncategorizedರೇಡಿಯೊ ಮಣಿಪಾಲ್ ನಲ್ಲಿ ಕಥೆ ಕೇಳೋಣ'ದ 153 ನೇ ಸಂಚಿಕೆ ಪ್ರಸಾರ

ರೇಡಿಯೊ ಮಣಿಪಾಲ್ ನಲ್ಲಿ ಕಥೆ ಕೇಳೋಣ’ದ 153 ನೇ ಸಂಚಿಕೆ ಪ್ರಸಾರ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್
ಸಮುದಾಯ ಬಾನುಲಿ ಕೇಂದ್ರವು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 153ನೇ ಸಂಚಿಕೆ ಎಪ್ರಿಲ್ ತಿಂಗಳ ದಿನಾಂಕ 5 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತ ಶಿಕ್ಷಕರಾಗಿರುವ ಗಾಯತ್ರಿ ನಾರಾಯಣ ಅಡಿಗ ವಂಡ್ಸೆ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಎಪ್ರಿಲ್ 6 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular