ಸಿವಿಲ್ ನ್ಯಾಯಾಧೀಶರಾದ ಮಂಜುನಾಥ ಶಿವಲಿಂಗಪ್ಪ ಜಿ.ಇವರಿಗೆ ಸನ್ಮಾನ

0
8

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಪ್ರತೀ ವರ್ಷ ನೀಡುವ ಪುಸ್ತಕ ವಿತರಣ ಸಮಾರಂಭದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗೆ ಅರ್ಜಿ ಫಾರಂ ಮೇ.15 ರಂದು
ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾದೀಶರಾದ ಮಂಜುನಾಥ ಶಿವಲಿಂಗಪ್ಪ ಇವರಿಗೆ ಸನ್ಮಾನ ಸಮಾರಂಭ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಳದಂಗಡಿ ಅರಮನೆ ಸನ್ಮಾನಿತರಿಗೆ ಹರಸಿದರು.

ಸಮಾರಂಭದ ವೇದಿಕೆಯಲ್ಲಿ ಉದ್ಯಮಿ ಸುರೇಶ್ ಪೂಜಾರಿ ಮುಂಬಯಿ, ಎಂ.ಗಂಗಾಧರ ಮಿತ್ತಮಾರು, ಅಮಣಿ ಮಂಜುದೇವಾಡಿಗ
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜಶೇಖರ ಶೆಟ್ಟಿ, ವಿಜಯ ಕುಮಾರ್ ಆಮಂತ್ರಣ , ಮೋಹನ್ ಎ.ದಾಸ್, ಶ್ರೀ.ಕ್ಷೇ.ಧ.ಗ್ರಾ ಯೋಜನಾಧಿಕಾರಿ, ಮೆಲ್ವೀಚಾರಕರು , ಧರ್ಣಪ್ಪ ಪೂಜಾರಿ ದೋರಿಂಜೆ, ಪ್ರಭಾಕರ ಕೊಡಂಗೆ ಭಾಗವಹಿಸಿದ್ದರು.

ಶ್ರೇಯಾ ಪ್ರಾರ್ಥಿಸಿದರು. ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಸ್ವಾಗತಿಸಿದರು. ದೇವದಾಸ್ ಆಲಡ್ಕ ಸನ್ಮಾನ ಪತ್ರ ವಾಚಿಸಿದರು. ಪಿ.ಹೆಚ್.ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here