ಮೋಕ್ಷದ ಶಾಶ್ವತ ಸುಖ ಪ್ರಾಪ್ತಿಯೇ ಸಂಸಾರದ ಸಾರ; ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸನ್ನಿಧಾನಂಗಳ್

0
131

ಚಾತುರ್ಮಾಸ್ಯ ಗುರು ದರ್ಶನ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಇತ್ಯಾದಿ ಪ್ರದೇಶಗಳ ಸ್ಥಾನಿಕ ಬ್ರಾಹ್ಮಣ ಸಂಘದ ಸದಸ್ಯರು ಶ್ರಿಂಗೇರಿ ಶಾರದಾ ಪೀಠಾಧೀಶರುಗಳ ವೇದವಾಕ್ಯದಂತೆ ಚೌತಿಯ ಹಿಂದಿನ ಆದಿತ್ಯವಾರ ನಿಗದಿಯಂತೆ ಸಂಧಿಸುತ್ತಿರುವುದು ಸಂತಸ ತಂದಿದೆ. ಅದಕ್ಕಾಗಿ ಅವರೆಲ್ಲರಿಗೂ ನಮ್ಮ ಆಶೀರ್ವಾದ ಸದಾ ಬೆಂಬಲವಾಗಿ ಇದೆ ಎಂದು ಹರಸಿದರು.
ಸನಾತನ ಪರಂಪರೆಯಲ್ಲಿ ಸ್ಥಾನಿಕ ಬ್ರಾಹ್ಮಣರು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಅದಕ್ಕೆ ಮುಖ್ಯ ಕಾರಣ ಅವರ ಸದ್ಧರ್ಮ ಆಚರಣೆ. ವಿದ್ಯಾರ್ಜನೆ, ಲೌಕಿಕ ಕಾರ್ಯ ದೊಂದಿಗೆ ಸದ್ಧರ್ಮ ಧಾರ್ಮಿಕ ಆಚರಣೆ ಕಡೆಗೆ ವಿಶೇಷ ಗಮನವಿರಲಿ. ಅದರ ಮಹತ್ವವನ್ನು ಎಲ್ಲರೂ ಅರಿತು ಕೊಳ್ಳಬೇಕು ಎಂದು ವಿವಿಧ ಕಥೆಗಳ ಮೂಲಕ ಅರ್ಥ ಮಾಡಿಸಿದರು ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸನ್ನಿಧಾನಂಗಳವರು.
ಧರ್ಮ ರಕ್ಷಣೆ, ಆಚರಣೆ ಮಾಡುವಾಗ -ಬುದ್ಧಿಶಕ್ತಿ, ಶೃದ್ಧೆ, ಒಲವು ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅವಿವೇಕ, ಕಾಮ, ಕ್ರೋಧ, ಅರಿಷಡ್ವರ್ಗಗಳನ್ನು ದೂರಮಾಡಿ ವಿವೇಕವನ್ನು ಹೆಚ್ಚಿಸಿಕೊಳ್ಳಲು ತಿಳಿಹೇಳಿದರು. ಶಂಕರ ಭಗವತ್ಪಾದರು ತಿಳಿಸಿದಂತೆ ಅವಿವೇಕ ಹೋಗಲಾಡಿಸಿ ಕೊಂಡು ಸದ್ಧರ್ಮದಿಂದ ಬದುಕನ್ನು ಸಾರ್ಥಕ ಮಾಡಿಕೊಳ್ಳಿ. ಉತ್ತಮ ಕಾರ್ಯದಿಂದ ದೊಡ್ಡ ಫಲ ಪ್ರಾಪ್ತಿಯ ಮೋಕ್ಷ ದೊರಕುತ್ತದೆ. ಅದು ಅಧಿಕ ಸುಖದ ಸ್ಥಿತಿ.
ದೃಢ ಮನಸ್ಸಿನಿಂದ ನಾಸ್ತಿಕ, ಆಸ್ತಿಕರಿಬ್ಬರೂ ಬೇರೆ ಬೇರೆ ಮಾರ್ಗದಲ್ಲಿ ಸುಖವನ್ನೇ ಆಶಿಸುತ್ತಾ ಮೋಕ್ಷ ಕ್ಕಾಗಿ ಹಂಬಲಿಸುತ್ತಾರೆ. ಅದೇ ಸಂಸಾರದ ಸಾರ. ಆಸೆ ಈಡೇರಿಸಿಕೊಳ್ಳುವ ಕ್ರಮ, ಮಾರ್ಗ ತಿಳಿಯದೇ ಹಲವರು ಅಲೆದಾಡುತ್ತಿದ್ದಾರೆ. ಅವರೆಲ್ಲರೂ ಸುಖ, ಶಾಂತಿ, ನೆಮ್ಮದಿ, ಫಲ ಪ್ರಾಪ್ತಿಗಾಗಿ ಸ್ವಧರ್ಮವನ್ನು ತಪ್ಪದೇ ಆಚರಿಸಲು ತಮ್ಮ ಆಶೀರ್ವಚನದಲ್ಲಿ ಆದೇಶಿಸಿದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here