ಚಿಂತಾಮಣಿ: ಕನ್ನಡ ಸಾಹಿತ್ಯದ ಸೃಜನಶೀಲತೆಯನ್ನು ರಾಜ್ಯಾದ್ಯಂತ ಬೆಸೆಯುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು, ಚಿಂತಾಮಣಿ ತಾಲೂಕು ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಜುಲೈ 11ರಂದು ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮ ಮಂಗಳ.ಡಿ.ವಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಚಿಂತಾಮಣಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್.ಎನ್.ವಿ ಪ್ರಾಸ್ತಾವಿಕ ನುಡಿ ನುಡಿದರು .
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಪ್ರೊ.ಡಾ.ಕೋಡಿರಂಗಪ್ಪ, ಪ್ರೊ.ಶಿವಶಂಕರ ಪ್ರಸಾದ್ ಕೆ.ಆರ್. ಡಾ.ಎಂ.ವಿಜಯ, ಹಿರಿಯ ಸಾಹಿತಿ ಕಾಗತಿ ವಿ. ವೆಂಕಟರತ್ನಂ, ಕ.ರ.ವೇ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್, ಮುಖ್ಯ ಶಿಕ್ಷಕ ಜಮೀಲ್ ಪಾಷಾ ಟಿ.ಎನ್., ಹಿರಿಯ ಪಶುವೈದ್ಯಾಧಿಕಾರಿ ಡಾ.ಎನ್. ಅಶ್ವಿನಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ.ಶ್ರೀನಿವಾಸ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕ ಅನಿತ.ವಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕವಿಗಳಾದ ಸು ಶಿ ಶಾಂತಕುಮಾರ್ ಹರವೆ, ಕಾಗುಶ್ರೀ ಕಾಳನಹುಂಡಿ, ವಿನಯ್ ಪಿ ಬಾವಿ, ಎಚ್ ಸತೀಶ್ ಕುಮಾರ್, ಶ್ರೀನಿವಾಸ್ ಎಸ್, ಶಿವು, ಜಿಎಸ್ ಪರಮೇಶ್ವರ ಗುಪ್ತ , ಗುಡ್ಡಪ್ಪ ಎನ್, ಕ್ಷೀರಲಿಂಗ ಜಿ ಬೊಮ್ಮನಹಾಳ, ಕವಯಿತ್ರಿಯರಾದ ಕುಸುಮ ಮಂಗಳ ಡಿ ವಿ, ಸ್ಮಿತ ವಾಣಿ ಸೀತಮ್ಮ, ಶ್ರೀಮತಿ ಮಾಲತಿ, ವೀಣಾ ಸುಧೀಂದ್ರ, ಕೋಮಲ ಪ್ರಕಾಶ್, ಶ್ರೀಮತಿ ಚೈತ್ರ ಬಿ ಜಿ, ಪ್ರಮೀಳಾ ಮಹಾದೇವ್, ರಾಧಾ ಡಾ ಪ್ರಕಾಶ್, ಮೀರಾ ನಾಡಿಗ್, ಶ್ರೀಮತಿ ರಾಧಾಮಣಿ ಎಂ, ಶ್ಯಾಮಲಾದೇವಿ ಎಲ್ಲಾ ಕವಿಗಳು ತಮ್ಮ ಸ್ವ ರಚಿತ ಕವನಗಳನ್ನು ಉತ್ತಮವಾಗಿ ವಾಚಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಚಿಂತಾಮಣಿ ಪಟ್ಟಣದ ಕರವೇ ನಾಗರಾಜು ರವರು ಹಾಗೂ ಕನ್ನಡ ಬಂಧುಗಳು, ಕನ್ನಡ ಸಾಹಿತ್ಯಾಸಕ್ತರು, ಮುಂತಾದವರು ಪಾಲ್ಗೊಂಡು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿದರು. ಕಾರ್ಯಕ್ರಮದ ಹಿಂದಿನ ದಿನವೇ ಬಂದಿದ್ದ ಕವಿಗಳಿಗೆ ಚಿಂತಾಮಣಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದರು. ಬೆಳಗಿನ ತಿಂಡಿ ಮಧ್ಯಾಹ್ನದ ಊಟೋಪಚಾರವೂ ಬಹಳ ಚೆನ್ನಾಗಿತ್ತು ಈ ಒಂದು ಅರ್ಥಪೂರ್ಣವಾದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಮಗೆ ಭಾಗವಹಿಸಲು ಅವಕಾಶವನ್ನು ನೀಡಿದ ಚಿಂತಾಮಣಿ ಕಸಾಪ ಅಧ್ಯಕ್ಷರಾದ ಶ್ರೀನಿವಾಸನ್ ಎನ್ ವಿ ರವರಿಗೆ ಮತ್ತು ಚಿಂತಾಮಣಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಪ್ರೊ ಕುಸುಮ ಮಂಗಳ ಡಿ.ವಿ. ಮೇಡಂ ರವರಿಗೆ, ಚಿಂತಾಮಣಿಯ ಮಾಧ್ಯಮ ಮಿತ್ರರಿಗೆ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಮೈಸೂರು ಭಾಗದ ಕವಿಗಳಾದ ಸು ಶಿ ಶಾಂತಕುಮಾರ್ ಹರವೆ ರವರು ಪತ್ರಿಕೆಗೆ ತಿಳಿಸಿದ್ದಾರೆ.

