ಕಾಸರಗೋಡು : ನವೆಂಬರ್ 1ರಂದು ಕಾಸರಗೋಡು ಡಾ. ವಾಮನ್ ರಾವ್ ಬೇಕಲ್ ಸಾರತ್ಯದ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ (ರಿ.) ಮತ್ತು ಕನ್ನಡ ಸಂಘ (ನೋo) ಕರ್ನಾಟಕ ಸರಕಾರ ವಾಣಿಜ್ಯ ತೆರಿಗೆಗಳ ಇಲಾಖೆ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 71ನೇ ಕರ್ನಾಟಕ ರಾಜ್ಯೋತ್ಸವಸಮಾರಂಭ ದ ಮುನ್ನುಡಿಯಾಗಿ ನಡೆದ ಕನ್ನಡ ಮೆರವಣಿಗೆ ಗೆ ಕಾರ್ಯಕ್ರಮ ಅಧ್ಯಕ್ಷರಾದ ಶ್ರೀ ಟಿ. ಆರ್. ಕೃಷ್ಣಕುಮಾರ್, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ಬೆಂಗಳೂರು ಇವರೀಗೆ ಕನ್ನಡ ಭವನದ ನಿರ್ದೇಶಕರಾದ ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ಕನ್ನಡ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಎಲ್ಲೇ ಇರು ಎಂತೆ ಇರು ಕನ್ನಡಿಗನಾಗಿರು ಎಂಬ ಕುವೆಂಪುವಿನ ಮಾತಿನಂತೆ, ಬೌಗೋಲಿಕವಾಗಿ ನಾವು ಕೇರಳ ಸರಕಾರದಲ್ಲಿ ಇದ್ದರೂ ಅಚ್ಚ ಕನ್ನಡ ಪ್ರದೇಶವಾದ ಈ ಕಾಸರಗೋಡಿನಲ್ಲಿ ಕನ್ನಡ ಧ್ವಜದೊಂದಿಗೆ, ಕನ್ನಡ ಸಂಸ್ಕಾರದೊಂದಿಗೆ ಜೀವ ಇರುವ ವರೆಗೂ ಕನ್ನಡದ ವಿರುದ್ಧ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಕನ್ನಡ ರಾಜ್ಯೋತ್ಸವವನ್ನು ಇಲ್ಲಿ ರಾಜಾರೋಷವಾಗಿ ಆಚರಿಸಿ ಸಂಭ್ರಮಿಸುತ್ತೇವೆ. ಕೇರಳ ಸರಕಾರದ ಕನ್ನಡ ಭಾಷಾ ವಿರುದ್ಧ ಕಾನೂನುಗಳನ್ನು ಸಾರಾಸಗಟಾಗಿ ವಿರೋದಿಸುತ್ತೇವೆ ಎಂದು ಧ್ವಜ ನೀಡಿ ಮೆರವಣಿಗೆ ಚಾಲನೆ ಮಾಡಿ ಡಾ. ಹೊಳ್ಳ ಹೇಳಿದರು. ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ನೇತೃತ್ವ ವಹಿಸಿದರು. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಾದ ಶ್ರೀ ಎಮ್. ಪಿ. ರವಿಪ್ರಸಾದ್, ಆರ್. ಡಿ. ಮೇಘಣ್ಣನವರ, ಶ್ರೀ ರಮೇಶ್ ಕುಮಾರ್, ಮೆರವಣಿಗೆಯ ಮುಖ್ಯರಾಗಿದ್ದರು. ಶ್ರೀ ಧರ್ಮರಾಜು ಅಧ್ಯಕ್ಷರು ವಾಣಿಜ್ಯ ತೆರಿಗೆಗಳ ನೌಕರರ ಸಂಘ ಅಧ್ಯಕ್ಷರು, ಶ್ರೀ ಕೆ. ದೋರೈ ಅಧ್ಯಕ್ಷರು ಕ್ಷೇಮಭಿವೃದ್ದಿ ಅಧ್ಯಕ್ಷರು, ಕನ್ನಡ ಸಂಘ ಅಧ್ಯಕ್ಷರಾದ ಶ್ರೀ ಕೆ. ಸಿ. ಮಂಜುನಾಥ್ ಉಪಾಧ್ಯಕ್ಷರಾದ ಶ್ರೀಮತಿ ಶಬಿಸ್ತ ತಬಸ್ಸುಮ್, ಎಸ್, ಆರ್ ರಂಗರಾಮಯ್ಯ, ಶ್ರೀಮತಿ ನಾಗಲಕ್ಷ್ಮಿ ಕೆ. ಎಸ್, ವಿ. ಮಾರುತಿ, ರಶ್ಮಿ ಎಸ್ ಎಲ್, ಎಸ್. ಮಂಜುನಾಥ್, ಸಿ. ಕೃಷ್ಣಮೂರ್ತಿ, ಬಿ. ಆರ್. ಗೋಪಾಲಯ್ಯ, ಏನ್. ಆರ್ ಶ್ರೀನಿವಾಸ್, ಸಿ. ಪರಶಿವಾಚರ್, ಮಧು ಕೊಡನಾಡು, ಶ್ರೀ ಇರಾ ನೇಮು ಪೂಜಾರಿ, ವಸಂತ್ ಕೆರೆಮನೆ, ಪ್ರದೀಪ್ ಬೇಕಲ್, ಜಗನ್ನಾಥ್ ಶೆಟ್ಟಿ, ಅಖಿಲೇಶ್ ನಗುಮುಖಮ್, ವಸಂತ ಬಾರಡ್ಕ,ಹಾಗೂ ಅಪಾರ ಸಂಖ್ಯೆಯ ಕನ್ನಡ ಮುಂದಾಳುಗಳು ಮೆರವಣಿಗೆ ಮೆರಗುಗೊಳಿಸಿದರು ನಾಸಿಕ್ ಬ್ಯಾಂಡ್ ಆಕರ್ಷಣೆಯಾಯಿತು.

