ಶಿರಸಿ ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ-2026 ಕೇರಳ- ಕರ್ನಾಟಕ ಉತ್ಸವವನ್ನು ಸದಾ ನೆನಪಿಸುವ ಲಾಂಛನ (ಲೋಗೋ) ವನ್ನು ಖ್ಯಾತ ಹಿರಿಯ ಚಿತ್ರಕಲಾವಿದ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ. ಹೆಗಡೆ ತಾರಗೋಡ ಅವರು ರಚಿಸಿದ್ದಾರೆ.
ಕರ್ನಾಟಕ ಕಲಾ ವಲಯದಲ್ಲಿ ಜಿ.ಎಂ ಹೆಗಡೆ ತಾರಗೋಡ ಶಿರಸಿ ತಮ್ಮ ಕಲಾ ಪ್ರಕಾರಗಳ ಸಾಂಪ್ರದಾಯಿಕವಲ್ಲದೇ, ಆಧುನಿಕ ಶೈಲಿ ,ನವ್ಯ ಹಾಗೂ ಸಂಪ್ರದಾಯಗಳ ಮಿಶ್ರಣ ಶೈಲಿ ಇವರದ್ದೇ ಶೈಲಿಯಲ್ಲಿ ಮೂಡಿಬಂದಿದೆ .ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ಇವರ ಕಲಾ ಪ್ರಕಾರಗಳು ದೇಶಾದಾದ್ಯಂತ ಪ್ರದರ್ಶನಗೊಂಡಿದ್ದು ಎಂ.ಟಿ.ವಿ ಆಚಾರ್ಯ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವೀರಪ್ಪ ದತ್ತಿ ರಾಷ್ಟ್ರೀಯ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಜಿ. ಎಂ.ಹೆಗಡೆ ತಾರಗೋಡ ಅವರನ್ನು ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- ಕೇರಳ -ಕರ್ನಾಟಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಗುವುದು. ಎಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ, ಕೇರಳ- ಕರ್ನಾಟಕ ಉತ್ಸವದಲ್ಲಿ ಉದ್ಘಾಟನೆ ಹಾಗೂ ವಿವಿಧ ಕಲಾ ಪುಸ್ತಕ , ವಸ್ತು ಪ್ರದರ್ಶನಗಳ ಉದ್ಘಾಟನೆ, ಹೊಸ ಕೃತಿಗಳು, ಸ್ಮರಣ ಸಂಚಿಕೆ ಬಿಡುಗಡೆ ,ಅಂತರ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಟಿ, ಅಂತರ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ , ಅಂತರ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿ , ಭಾಷಾ ಬಾಂಧವ್ಯ ಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಗಡಿನಾಡು- ಹೊರನಾಡು ಅನಿವಾಸಿ ಭಾರತೀಯ ಕನ್ನಡಿಗರು- ಕನ್ನಡ ಸಂಘಟನೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನ ಪ್ರಶಸ್ತಿ ಹಾಗೂ 36 ಕ್ಷೇತ್ರದ ಸಾಧಕರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕೇರಳ -ಕರ್ನಾಟಕ ಉತ್ಸವದಲ್ಲಿ ರಾಜ್ಯದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ಪ್ರಸಿದ್ಧ ಚಿತ್ರ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಲಿದೆ ಸಮೂಹ ನೃತ್ಯ , ಜಾನಪದ ನೃತ್ಯ ,ಸುಗಮ ಸಂಗೀತ, ದಾಸ ಸಂಕೀರ್ತನೆ, ಜಾನಪದ ಭಾವಗೀತೆ ,ಚಲನಚಿತ್ರ ಗೀತಗಾಯನ , ದೇಶ ಭಕ್ತಿ ಗೀತೆಗಳ ಹಾಗೂ 100 ಭಜನಾ ಸಂಕೀರ್ತನ ಕಾರರಿಂದ ಸಮೂಹ ಗಾಯನ ನಡೆಯಲಿದೆ. ಆಸಕ್ತ ತಂಡಗಳು ಸಂಘ ಸಂಸ್ಥೆಗಳು ಪತ್ರ ಮುಖೇನ ಸಂಪರ್ಕಿಸಬಹುದು.
ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು-671121
ಮೊಬೈಲ್ -9448572016

