ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಬೇಸಿಗೆ ಶಿಬಿರದ ಉದ್ದೇಶ ಶ್ರೀ ಸುಧಾಕರ್ ರೈ ಅಭಿಮತ

0
7

ಪುತ್ತೂರು : ಒಳಮೊಗ್ರು ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಒಳಮೊಗ್ರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಇವುಗಳ ಜಂಟಿ ಆಶ್ರಯದಲ್ಲಿ ಕಳೆದ 11 ದಿನಗಳಿಂದ ಒಳಮೊಗ್ರು ಗ್ರಂಥಾಲಯ ಕಛೇರಿಯಲ್ಲಿ ನಡೆಯುತ್ತಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ನಿವೃತ್ತ ಮುಖ್ಯಗುರುಗಳು ಹಾಗು ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಸುಧಾಕರ ರೈ ಯವರು “ಮಕ್ಕಳಿಗೆ ಸಾಮಾಜಿಕ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳು ಕುಸಿಯದಂತೆ ಈ ಬೇಸಿಗೆ ಶಿಬಿರಗಳು ಕಲಿಸುತ್ತವೆಯೆಂದು ಪ್ರಹ್ಲಾದನ ದೃಷ್ಟಾಂತಕಥೆ ಮೂಲಕ ಶುಭ ಹಾರೈಸಿದರು.

ಕಾರ್ಯಕ್ರಮ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು. ಮುಖ್ಯ ಅತಿಥಿಯಾಗಿ ಗ್ರಂಥಾಲಯ ಸಮಿತಿ ಸದಸ್ಯರಾದ ರಾಜೇಶ್ ರೈ ಪರ್ಪುಂಜ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಯುವ ಸಾಹಿತಿ ನಾರಾಯಣ ಕುಂಬ್ರರವರು “ಗ್ರಾಮೀಣ ಭಾಗಗಳಲ್ಲಿ ಇಂದು ಮೊಬೈಲ್ ಮಾಯೆ ಆವರಿಸಿರುವ ಈ ಕಾಲಘಟ್ಟದಲ್ಲಿ ಮೊಬೈಲ್ ಬಿಟ್ಟು ಬದುಕು ಕಟ್ಟು ಎಂಬಂತೆ ಇಂತಹ ಶಿಬಿರಗಳ ಅವಶ್ಯಕತೆಯಿದೆಯೆಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿಯಾದ ಕೆ ಪಿ ಎಸ್ ಕುಂಬ್ರ ಇದರ ಅತಿಥಿ ಶಿಕ್ಷಕಿ ಶ್ರಾವ್ಯರವರು ಮಕ್ಕಳ ವ್ಯಕ್ತಿತ್ವ ವಿಕಸನ ಬೆಳೆಯುವಲ್ಲಿ ಶಿಕ್ಷಕರು ಮಾತ್ರವಲ್ಲದೇ ಮನೆಯ ಪೋಷಕರ ಪಾತ್ರವೂ ಮುಖ್ಯವೆಂದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪ್ರಾ ಶಾಲೆ ಕೈಕಾರ ಇದರ ಮುಖ್ಯ ಗುರು ರಾಮಣ್ಣ ಎಸ್, ಸುಕನ್ಯಾ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಗ್ರಂಥಾಲಯದ ಮೇಲ್ವಿಚಾರಕರಾದ ಸಿರಿನಾ ಕುಂಬ್ರ, ರಾಜೀವಿ ಕುಂಬ್ರರವರು ಉಪಸ್ಥಿತರಿದ್ದರು.

ಸುಮಾರು 40 ಶಿಬಿರಾರ್ಥಿಗಳು ಶಿಬಿರದ ಸದುಪಯೋಗಪಡಿಸಿಕೊಂಡರು.ಶಿಬಿರದ ವಿದ್ಯಾರ್ಥಿಗಳಿಗೆ ಪೋಷಕರಾದ ರಮ್ಯರವರು ಐಸ್ ಕ್ರೀಮ್ ವಿತರಿಸಿದರು.
ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ 11 ದಿನಗಳಲ್ಲಿ ಉಟೋಪಾಚಾರದ ವ್ಯವಸ್ಥೆ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಲಾಯಿತು. ಅಲ್ಲದೇ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ಗಣ್ಯರು ವಿತರಿಸಿದರು.

ಶಿಬಿರದ ವಿದ್ಯಾರ್ಥಿಗಳಾದ ಅನುಶ್ರೀ, ಸಾಕ್ಷಿ ರೈ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಗ್ರಂಥಾಲಯ ಮೇಲ್ವಿಚಾರಕರಾದ ಸಿರಿನಾ ಕುಂಬ್ರ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here