“ಹೋಟೆಲ್ ಚಟ್ನಿಯ ಅಸಲಿ ಸೀಕ್ರೆಟ್ ಬಯಲು!” – ಅಜ್ಜಿಯ ಕಾಲದ ಈ ಒಂದು ಮಸಾಲೆ ಸಾಕು, ಇಡ್ಲಿ-ದೋಸೆ ರುಚಿ ಡಬಲ್!

0
24

ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ಮುಂದೆ ಇದ್ದರೆ ಸಾಕು, ಹೊಟ್ಟೆಗೂ ಮನಸಿಗೂ ಖುಷಿ. ಆದರೆ ಈ ತಿಂಡಿಗಳ ನಿಜವಾದ ರುಚಿ ಹೆಚ್ಚಿಸುವುದು ಪಕ್ಕದಲ್ಲಿರುವ ತೆಂಗಿನಕಾಯಿ ಚಟ್ನಿಯೇ. ಮನೆಯಲ್ಲಿ ಎಷ್ಟೇ ಪ್ರಯತ್ನಿಸಿದರೂ “ಹೋಟೆಲ್ ಸ್ಟೈಲ್” ರುಚಿ ಬರೋದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ನಮ್ಮ ಅಜ್ಜಿಯ ಕಾಲದ ಒಂದು ಸಣ್ಣ ಸೀಕ್ರೆಟ್ ಟಿಪ್ ಬಳಿಸಿದರೆ ಮನೆಯಲ್ಲೇ ಅದೇ ಹೋಟೆಲ್ ರುಚಿ ಸಿಗಬಹುದು.

ಈ ಚಟ್ನಿಯ ವಿಶೇಷತೆ ಏನೆಂದರೆ, ಕೇವಲ ಐದು ನಿಮಿಷಗಳಲ್ಲಿ ತಯಾರಾಗುತ್ತದೆ. ಆದರೆ ರುಚಿ ಮಾತ್ರ ನಾಲಿಗೆ ಮೇಲೆ ಉಳಿಯುತ್ತದೆ. ಇದರಲ್ಲಿ ಬಳಸುವ ಇಂಗು, ಕರಿಬೇವು ಮತ್ತು ಹುರಿದ ಹಸಿಮೆಣಸಿನಕಾಯಿ ಚಟ್ನಿಗೆ ಅದ್ಭುತವಾದ ಸುವಾಸನೆ ಮತ್ತು ಹಳೆಯ ಮನೆಯ ಅಡುಗೆ ರುಚಿಯನ್ನು ನೀಡುತ್ತವೆ.

ಚಟ್ನಿಗೆ ಬೇಕಾಗುವ ಪದಾರ್ಥಗಳು

ಹಸಿ ತೆಂಗಿನಕಾಯಿ ಚೂರುಗಳು – 1 ಕಪ್
ಹುರಿಗಡಲೆ (ಪುಟಾಣಿ) – ಅರ್ಧ ಕಪ್
ಹಸಿಮೆಣಸಿನಕಾಯಿ – 5 ರಿಂದ 6
ಶುಂಠಿ – 1 ಇಂಚು
ಬೆಳ್ಳುಳ್ಳಿ – 3 ಎಸಳು
ಹುಣಸೆಹಣ್ಣು – ಒಂದು ಸಣ್ಣ ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಒಗ್ಗರಣೆಗೆ
ಸಾಸಿವೆ – ಅರ್ಧ ಚಮಚ
ಜೀereke – ಅರ್ಧ ಚಮಚ
ಒಣಮೆಣಸಿನಕಾಯಿ – 2
ಕರಿಬೇವು – ಎರಡು ಎಸಳು
ಇಂಗು – ಒಂದು ಚಿಟಿಕೆ

ಮಾಡುವ ವಿಧಾನ

ಮೊದಲು ತೆಂಗಿನಕಾಯಿಯ ಕಪ್ಪು ಪದರ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ. ಹೀಗೆ ಮಾಡಿದರೆ ಚಟ್ನಿ ಹೋಟೆಲ್‌ನಲ್ಲಿ ಸಿಗುವಂತೆ ಬೆಳ್ಳಗೆ ಮತ್ತು ಮೃದುವಾಗಿ ಬರುತ್ತದೆ.

ನಂತರ ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಈ ಸಣ್ಣ ಟ್ರಿಕ್ ಚಟ್ನಿಯ ರುಚಿಯನ್ನು ಸಂಪೂರ್ಣ ಬದಲಿಸುತ್ತದೆ. ನಂತರ ಮಿಕ್ಸಿ ಜಾರ್‌ನಲ್ಲಿ ತೆಂಗಿನಕಾಯಿ, ಹುರಿಗಡಲೆ, ಹುರಿದ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ. ಮೊದಲು ನೀರು ಹಾಕದೆ ರುಬ್ಬಿ, ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹದವಾಗಿ ಗ್ರೈಂಡ್ ಮಾಡಿ.

ಅಜ್ಜಿಯ ಕಾಲದ ಸೀಕ್ರೆಟ್ ಒಗ್ಗರಣೆ!

ಅದೇ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀereke, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. ಕೊನೆಯಲ್ಲಿ ಒಂದು ಚಿಟಿಕೆ ಇಂಗು ಹಾಕಿದರೆ ಸಾಕು – ಚಟ್ನಿಯ ಪರಿಮಳವೇ ಬದಲಾಗುತ್ತದೆ! ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿದರೆ ಮನೆಯವರೆಲ್ಲ “ಇದು ಹೋಟೆಲ್ ಚಟ್ನಿಯಾ?” ಎಂದು ಕೇಳುತ್ತಾರೆ.

ರುಚಿ ಹೆಚ್ಚಿಸುವ ವಿಶೇಷ ಟಿಪ್ಸ್

ಒಗ್ಗರಣೆಯ ಕೊನೆಯಲ್ಲಿ ಇಂಗು ಹಾಕಿದರೆ ಚಟ್ನಿಗೆ ಹಳೆಯ ಕಾಲದ ಮನೆಯ ಅಡುಗೆ ಸುವಾಸನೆ ಬರುತ್ತದೆ.ಕರಿಬೇವನ್ನು ಚೆನ್ನಾಗಿ ಹುರಿದರೆ ಅದರ ರುಚಿ ಸಂಪೂರ್ಣವಾಗಿ ಚಟ್ನಿಗೆ ಇಳಿಯುತ್ತದೆ. ಸಾಂಪ್ರದಾಯಿಕ ದಕ್ಷಿಣ ಭಾರತೀಯ ರುಚಿ ಬೇಕಾದರೆ ಸಾಮಾನ್ಯ ಎಣ್ಣೆಯ ಬದಲು ತೆಂಗಿನ ಎಣ್ಣೆ ಬಳಸಿ ನೋಡಿ. ರುಚಿ ಮತ್ತಷ್ಟು ಹೆಚ್ಚುತ್ತದೆ!.

LEAVE A REPLY

Please enter your comment!
Please enter your name here