ಫಿಜಾ ಬೈ ನೆಕ್ಸಸ್ ಮಾಲ್‌ನಿಂದ ‘ದ ಸಮ್ಮರ್ ಕಿಡ್ಸ್ ಫೆಸ್ಟಿವಲ್ 2026’

0
7

ಮಂಗಳೂರು : ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್, ಮಕ್ಕಳ ಸೃಜನಶೀಲತೆ, ಕಲಿಕೆ ಮತ್ತು ಮೋಜಿನ ತಾಣವಾಗಿ ಬದಲಾಗಲು ಸಜ್ಜಾಗಿದೆ. ಏಪ್ರಿಲ್ 18 ರಿಂದ ಮೇ 24, 2026 ರವರೆಗೆ ಮಾಲ್‌ನಲ್ಲಿ ‘ದ ಸಮ್ಮರ್ ಕಿಡ್ಸ್ ಫೆಸ್ಟಿವಲ್ 2026’ ಆಯೋಜಿಸಲಾಗಿದೆ.

ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಹಬ್ಬವು ಉದ್ಯಮಶೀಲತೆ, ಸೃಜನಶೀಲತೆ, ಕಲೆಗಳು ಮತ್ತು ಆಟೋಟಗಳ ಸಂಯೋಜನೆಯಾಗಿದೆ. ಮಕ್ಕಳು ಕೇವಲ ವೀಕ್ಷಕರಾಗದೆ, ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಇದನ್ನು ರೂಪಿಸಲಾಗಿದೆ.

ಈ ಉತ್ಸವದಲ್ಲಿ ಮಲ್ಟಿ-ಜೋನ್ ಪೆವಿಲಿಯನ್ ಸೆಟಪ್ ಇರಲಿದ್ದು, ಮಕ್ಕಳು ಒಂದೇ ಭೇಟಿಯಲ್ಲಿ ಡಿಸ್ಕವರಿ, ಕ್ರಿಯೇಟಿವ್ ಸ್ಕಿಲ್ಸ್, ಕಲೆ ಮತ್ತು ಇಕೋ-ಲರ್ನಿಂಗ್ ವಲಯಗಳನ್ನು ಅನುಭವಿಸಬಹುದು. ಆಕರ್ಷಕ ಕಾರ್ಯಕ್ರಮಗಳ ಮೂಲಕ ಮಂಗಳೂರಿನ ಕುಟುಂಬಗಳಿಗೆ ಈ ಬೇಸಿಗೆಯಲ್ಲಿ ಫಿಜಾ ಬೈ ನೆಕ್ಸಸ್ ಅತ್ಯುತ್ತಮ ತಾಣವಾಗಲಿದೆ.

1ನೇ ವಾರ (ಏಪ್ರಿಲ್ 18 – ಏಪ್ರಿಲ್ 19): ಪಾಕಕಲೆ ಮತ್ತು ಚಟುವಟಿಕೆಗಳ ಆರಂಭ
ವಿವಿಧ ಆಕ್ಟಿವಿಟಿ ಝೋನ್‍ಗಳೊಂದಿಗೆ ಹಬ್ಬಕ್ಕೆ ಚಾಲನೆ ಸಿಗಲಿದೆ. ಇದರೊಂದಿಗೆ ‘ಲಿಟಲ್ ಚೆಫ್ ಅಟ್ ದ ಮಾಲ್’ ಸ್ಪರ್ಧೆಯ ಪ್ರಾಥಮಿಕ ಸುತ್ತುಗಳು ಮತ್ತು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಪುಟಾಣಿಗಳಿಗೆ ಪಾಕಕಲೆಯ ಅನುಭವ ನೀಡಲಿದೆ.

2ನೇ ವಾರ (ಏಪ್ರಿಲ್ 23 – ಏಪ್ರಿಲ್ 26): ಸೃಜನಶೀಲ ಕೌಶಲ ಮತ್ತು ಅಭಿವ್ಯಕ್ತಿ
ವಾರವಿಡೀ ಚಟುವಟಿಕೆ ವಲಯಗಳು ಮುಂದುವರಿಯಲಿವೆ. ವಾರಾಂತ್ಯದಲ್ಲಿ ‘ಬಿಕಮ್ ಆನ್ ಆಥರ್’ ಸೆಷನ್ ಮತ್ತು ಪ್ಲಾನೆಟೇರಿಯಂ ಶೋ ಮೂಲಕ ಮಕ್ಕಳಲ್ಲಿ ಅನ್ವೇಷಣಾ ಮನೋಭಾವವನ್ನು ಉತ್ತೇಜಿಸಲಾಗುತ್ತದೆ.

3ನೇ ವಾರ (ಮೇ 7 – ಮೇ 10): ಸಂಭ್ರಮ ಮತ್ತು ಸಂವಹನ
ಚಟುವಟಿಕೆ ವಲಯಗಳ ಜೊತೆಗೆ, ವಾರಾಂತ್ಯದಲ್ಲಿ ವಿಶೇಷ ‘ತಾಯಂದಿರ ದಿನಾಚರಣೆ’ಯನ್ನು ಆಯೋಜಿಸಲಾಗಿದ್ದು, ಕುಟುಂಬಗಳಿಗಾಗಿ ಆಕರ್ಷಕ ಕಾರ್ಯಕ್ರಮಗಳು ಇರಲಿವೆ.

4ನೇ ವಾರ (ಮೇ 21 – ಮೇ 24): ಕಲಿಕೆ ಮತ್ತು ಬಾಲ ಉದ್ಯಮಿಗಳು
ಅಂತಿಮ ವಾರದಲ್ಲಿ ‘ಜೂನಿಯರ್ ಎಂಟರ್‌ಪ್ರೆನರ್ಸ್ – ಕಿಡ್ಸ್ ಫ್ಲೀ ಮಾರ್ಕೆಟ್’ ಮತ್ತು ತಜ್ಞರ ಉಪನ್ಯಾಸ ಇರಲಿದೆ. ಇದು ಮಕ್ಕಳಲ್ಲಿ ಉದ್ಯಮಶೀಲತೆ ಮತ್ತು ಸೃಜನಶೀಲ ಕಲಿಕೆಯನ್ನು ಉತ್ತೇಜಿಸುತ್ತದೆ.

LEAVE A REPLY

Please enter your comment!
Please enter your name here