ಸಾಹಿತ್ಯದ ಮೂಲಕ ಜನರನ್ನು ಒಗ್ಗೂಡಿಸುವ ಚಿಗುರೆಲೆ ಸಾಹಿತ್ಯ ಬಳಗದ ಕಾರ್ಯ ಪ್ರಶಂಸನೀಯ- ಗೋಕುಲ್ ನಾಥ್ ಪಿ. ವಿ

0
28

ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸದ್ಭಾವ ಚಿಗುರು ಕವಿಗೋಷ್ಠಿ, ಚಿಗುರೆಲೆ ಗೌರವ ಸನ್ಮಾನ -2026, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಸಹಕಾರದಲ್ಲಿ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ಆಶ್ರಯದಲ್ಲಿ ನಡೆಯಿತು.

ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್ ನಾಥ್ ಪಿ.ವಿ. ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಚಿಗುರೆಲೆ ಸಾಹಿತ್ಯ ಬಳಗದ ಈ ಕಾರ್ಯ ಪ್ರಶಂಸನೀಯ. ಇಂತಹ ಕಾರ್ಯಗಳಿಗೆ ಪ್ರಗತಿ ಸ್ಟಡಿ ಸೆಂಟರ್ ಬಾಗಿಲು ಸದಾ ತೆರೆದಿರುತ್ತೆಯೆಂದರು.

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್‌ ಅವರು ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಒಗ್ಗಟ್ಟು ಚಿಗುರೆಲೆಯ ಪ್ರತಿ ಮನಸುಗಳಲ್ಲಿ ಇದೆ.ಚಿಗುರೆಲೆ ಸಾಹಿತ್ಯ ಬಳಗ ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ಥಂಭ, ಮಾತೃ ಸ್ಥಾನದಲ್ಲಿ ನಿಂತು ಈ ಸಂಸ್ಥೆ ಬೆಳೆಯುವಲ್ಲಿ ಪ್ರೋತ್ಸಾಹ ನೀಡಿದ್ದೇವೆ ಎಂದು ನುಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರು 67 ಕವಿಗಳ ಸಂಪಾದಿತ ಕೃತಿ ಸದ್ಭಾವ ಚಿಗುರು ಬಿಡುಗಡೆಗೊಳಿಸಿ ಚಿಗುರೆಲೆ ಸಾಹಿತ್ಯ ಬಳಗವು ಪುತ್ತೂರಿನಲ್ಲಿ ಸಾಹಿತ್ಯದ ತೇರನ್ನು ಹತ್ತೂರಿಗೂ ಎಳೆಯುವ ಪ್ರಯತ್ನ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಚಾರವೆಂದರು .

ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮೂಡಿಗೆರೆ ಘಟಕದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಾಜ್ ಮೂಡಿಗೆರೆಯವರು ನಾವು ಕಲಿತ ಕಲಿಕೆಯನ್ನು ಮತ್ತು ವಿಷಯಗಳನ್ನು ಮತ್ತೊಬ್ಬರಿಗೂ ಹಂಚುತ್ತಾ,ನಮ್ಮ ಜೊತೆ ಅವರನ್ನೂ ಬೆಳೆಸುವ ಪರಿಪಾಠ ನಾರಾಯಣ ಕುಂಬ್ರರದ್ದು ಅದರಂತೆ ಚಿಗುರೆಲೆ ಸಾಹಿತ್ಯ ಬಳಗದ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂಬ ಮಾತುಗಳನ್ನಾಡಿದರು. ಧರ್ಮಸ್ಥಳ ಜನಜಾಗೃತಿ ವೇದಿಕೆ ಅಳಿಕೆ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಅಳಿಕೆಯವರು ವಿದ್ಯಾಭ್ಯಾಸ ಎಷ್ಟಿದೆ ಎನ್ನುವುದಕ್ಕಿಂತ ಕಲಿತ ವಿಷಯಗಳನ್ನು ಎಷ್ಟು ನಾವು ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯವೆಂದರು ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿಯವರು ಬಹಳ ಅರ್ಥಪೂರ್ಣ ಸಾಹಿತ್ಯ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಬಳಗದ ಪ್ರತಿಯೊಬ್ಬರ ಶ್ರಮ ಜಯಗಳಿಸಿದೆಯೆಂದರು ನಿವೃತ್ತ ಉಪನ್ಯಾಸಕರಾದ ಮಹಾಲಿಂಗೇಶ್ವರ ಭಟ್ ಮಧುವನ ಮಾತನಾಡಿ ಮನಸ್ಸಿನ ಭಾವಗಳು ಸಂಧಿಸಲು ಸಾಹಿತ್ಯವೆಂಬುದು ಉತ್ತಮ ದಾರಿಯಾಗಿದೆ… ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯದೊಡನಾಟದಲ್ಲಿ ತೊಡಗಿಸುವಂತೆ ಪ್ರೆರೇಪಿಸಬೇಕೆಂದರು.

ಪತ್ರಕರ್ತರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ್ ಕುಮಾರ್ ಯು ಎಲ್‌ ರವರು ಚಿಗುರೆಲೆ ಗೌರವ ಸನ್ಮಾನ ಸ್ವೀಕರಿಸಿ ಸಾಧಕರಿಗಿತ್ತ ಗೌರವಾರ್ಪಣೆ ಅವರನ್ನು ಇನ್ನಷ್ಟು ಉತ್ತಮ ಸಾಧನೆಯತ್ತ ಕೊಂಡೊಯ್ಯಲಿಯೆಂದರು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಉಳಯರವರು ಸಾಹಿತ್ಯ ಸಂಗೀತ,ಸಾಂಸ್ಕೃತಿಕ ಹೀಗೆ ಕೆಲವೊಂದು ಕಲೆಗಳು ಮನಸ್ಸಿಗೆ ಮುದವನ್ನು ನೀಡಿ ನಮ್ಮೊಳಗಿನ ಪ್ರತಿಭೆಯನ್ನು ಹೊರಹಾಕಲು ಸಾಧನಗಳು… ಆ ನಿಟ್ಟಿನಲ್ಲಿ ಚಿಗುರೆಲೆಯ ಸಂಘಟಕರ ಕಾರ್ಯ ಪ್ರಶಂನೀಯವೆಂದು ಕಾರ್ಯಕ್ರಮಕ್ಕೆ ಶುಭ ಕೋರಿದರು ,ಕನ್ನಡ ತುಳು ಸಾಹಿತಿ ಶಶಿಕಲಾ ವರ್ಕಾಡಿ ಹಾಗು ಪುತ್ತೂರಿನ ಉಪ ತಹಸೀಲ್ದಾರ್ ಮತ್ತು ಯುವ ಸಾಹಿತಿ ಸುಲೋಚನಾ ಪಿ ಕೆ ಮುಖ್ಯ ಅತಿಥಿಗಳಾಗಿ ಸಂದರ್ಭೋಚಿತವಾಗಿ ಮಾತನಾಡಿದರು.

ಪಂಚ ಕೃತಿಗಳ ಲೋಕಾರ್ಪಣೆ:

ಕಾರ್ಯಕ್ರಮದಲ್ಲಿ ಸುಂದರ ಸಾರ್ಯರವರ ಚೊಚ್ಚಲ ಕೃತಿ ‘ಭಾವನೆಗಳ ಬೆನ್ನೇರಿ’ ಸಂಪಾದಿತ ಕೃತಿ ‘ಸದ್ಭಾವ ಚಿಗುರು’, ಶ್ರೀಕಲಾ ಕಾರಂತ್ ಅಳಿಕೆಯವರ ‘ವರ್ಣ ಚುಕ್ಕಿ’ ಅಶ್ವಿಜ ಶ್ರೀಧರ್ ಬೆಳ್ತಂಗಡಿಯವರ ‘ಪ್ರಕೃತಿ ಕಾಂತಿ’, ಪ್ರಿಯಾ ಸುಳ್ಯರವರ ‘ ಅಹನಿಪ್ರಿಯಾ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಚಿಗುರೆಲೆ ಗೌರವ ಸನ್ಮಾನ -2026

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಉಳಯ, ಕನ್ನಡ ರಾಜ್ಯೋತ್ಸವ ಪುರಸ್ಕೃತ ಪತ್ರಿಕೋದ್ಯಮ ಕ್ಷೇತ್ರದ ಉದಯ ಕುಮಾರ್ ಯು.ಎಲ್., ಸಾಹಿತ್ಯ ಕ್ಷೇತ್ರದ ಶ್ರೀಕಲಾ ಕಾರಂತ್‌ ಅಳಿಕೆ ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದ ಎಂ.ಎಸ್‌. ನಾಗರಾಜ್ ಮೂಡಿಗೆರೆ, ಏಷ್ಯಾ ನೆಟ್ ಸುವರ್ಣ ಚಾನೆಲ್ ಮತ್ತು ಕನ್ನಡ ಪ್ರಭ ಪತ್ರಿಕೆಯ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಮತ್ತು ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕರಾದ ಗೋಕುಲ್ ನಾಥ್ ಪಿ ವಿ ಅವರಿಗೆ ‘ಚಿಗುರೆಲೆ ಗೌರವ ಸನ್ಮಾನ’ ನೀಡಿ ಗೌರವಿಸಲಾಯಿತು.

ಸದ್ಭಾವ ಚಿಗುರು’ ಕವನ ಸಂಕಲನದ 67 ಕವಿಗಳಾದ ದಿವ್ಯ ರೈ ಪೆರುವಾಜೆ,ಹರ್ಷಿತ ಪಿ ಪುತ್ತೂರು,ಸುಧಾ ಎನ್ ರಾವ್,ಶ್ವೇತಾ ಎನ್ ಆಚಾರ್ಯ ಪುತ್ತೂರು, ಅನ್ನಪೂರ್ಣ ಎನ್ ಕೆ ಕುತ್ತಾಜೆ,ಜಯರಾಮ್ ಪಡ್ರೆ, ಆಶಾ ಅಡೂರ್ ಉಜಿರೆ,ದಿಯಾ ಎಂ ಗೌಡ, ಪ್ರಿಯಾ ಎಂ ಸುಳ್ಯ, ಪವಿತ್ರ ಎಂ.ಬೆಳ್ಳಿಪ್ಪಾಡಿ,ಸುನೀತಾ ಶ್ರೀರಾಮ್ ಕೊಯಿಲ,ಅಕ್ಷತಾ ನಾಗನಕಜೆ,ಸವಿತ ಕರ್ಕೇರ ಕಾವೂರು,ಮಲ್ಲಿಕಾ ಐ ಹಿರೇಬಂಡಾಡಿ,ಅಶ್ವಿಜ ಶ್ರೀಧರ್ ಬೆಳ್ತಂಗಡಿ,ಗಿರೀಶ್ ಪೆರಿಯಡ್ಕ,ಶೇಖರ ಎಂ ದೇಲಂಪಾಡಿ,ಅಪೂರ್ವ ಚೇತನ್ ಪೆರುಂದೋಡಿ, ಪಲ್ಲವಿ ಕೆ ಬಿ ಸಿ ರೋಡ್,ಸೌಮ್ಯಗೋಪಾಲ್ ಮಂಗಳೂರು, ಗೋಪಾಲಕೃಷ್ಣ ಶಾಸ್ತ್ರೀ ಮಂಗಳೂರು,ಹಂಸರಾಗ ಶೆಟ್ಟಿ ಗೋಳಿತ್ತೊಟ್ಟು, ಮಣಿಮುಂಡಾಜೆ, ರಾಧಿಕಾಗಿರೀಶ್ ಮಯ್ಯ ಬಿ.ಸಿ.ರೋಡ್,ರತ್ನಾ ಕೆ ಭಟ್ ತಲಂಜೇರಿ,ಕವಿತಾ ಸತೀಶ್ ಕರ್ಮಲ ಪುತ್ತೂರು,ಸಂಜೀವ ಮಿತ್ತಳಿಕೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮಲ್ಲಿಕಾ ಜೆ ರೈ ಪುತ್ತೂರು,ಯಜ್ಞೇಶ್ವರಿ ಎಸ್ ಶೆಟ್ಟಿ ಕೊಡ್ಮಣ್, ಸುಪ್ರೀತಾ ಚರಣ್ ಪಾಲಪ್ಪೆ ಕಡಬ,ಹರಿಣಾಕ್ಷಿ ಉಮೇಶ್ ನೇರಳಕಟ್ಟೆ,ಚಂದ್ರಹಾಸ ಕುಂಬಾರ ಬಂದಾರು, ಯಶೋದ ಬಲ್ನಾಡು, ಸೌಮ್ಯರಾಮ್ ಕಲ್ಲಡ್ಕ, ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್,ಐಡಾ ಲೋಬೊ ಮಾಣಿ,ರತ್ನಮಾಲ ಪಿ ಪುತ್ತೂರು,ಲೇಖನ ಏಮಾಜೆ, ಮೇಘನಾ ಪ್ರಶಾಂತ್ ಹೊಳ್ಳ ಬೈಪಾಡಿ ಶ್ರೀಕಲಾ ಕಾರಂತ ಅಳಿಕೆ, ಹರೀಶ್ ಮಂಜೊಟ್ಟಿ,ಶ್ರೀಶಾವಾಸವಿ ತುಳುನಾಡ್, ದೇವಿಕಾ ಜೆ ಜಿ ಬನ್ನೂರು,ಮಂಜುಶ್ರೀ ಎನ್ ನಲ್ಕ,ಮೋಹಿತಾ ಹೊಸ್ಮಠ, ವೀಣಾ ಜಗದೀಶ್ ಕುದ್ಮಾರು,ಶ್ವೇತಾರಮೇಶ್ ಬೆಳ್ಳಿಪ್ಪಾಡಿ,ಹಿತೇಶ್ ಕುಮಾರ್ ಎ ಕಾಸರಗೋಡು, ಶಶಿಧರ್ ಏಮಾಜೆ,ಕು. ಶ್ರೇಯ ಶೆಟ್ಟಿ, ಸಾರ್ಥಕ್ ರೈ ತುಂಡುಬೈಲು, ಸಂಧ್ಯಾ ಜಿ ಕೆ ಕುಂಬ್ರ,ವಿಂಧ್ಯಾ ಎಸ್ ರೈ ಕಡೇಶಿವಾಲಯ, ನಾರಾಯಣ ರೈ ಕುಕ್ಕುವಳ್ಳಿ, ಪ್ರಕೃತಿ ಏಮಾಜೆ, ಸಾನಿಧ್ಯ ಮಾರನಹಳ್ಳಿ,ಕೆ. ಆದಿತ್ಯ ಭಂಡಾರ್ಕರ್,ವೈಶಾಲಿ ಬೆಳ್ಳಿಪ್ಪಾಡಿ, ಪ್ರತೀಕ್ಷಾ ಆರ್ ಕಾವು,ಹರೀಶ್ ನಾಯಕ್ ಕಾಸರಗೋಡು,ಶಿಲ್ಪ ಬೆಳಗಲು, ಸಂಗೀತಾ ಕೂಡ್ಲು,ಅರ್ಚನಾ ಕಜೆಕಾರು,ಮಾನಸ ವಿಜಯ್ ಕೈಂತಜೆ,ಶಿಲ್ಪ ಕೆ ಎನ್ ರವರಿಗೆ ಸದ್ಭಾವ ಚಿಗುರು ಗೌರವಾರ್ಪಣೆ ಗಣ್ಯರ ಮೂಲಕ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮ ಉದ್ಘಾಟನೆ ನಂತರ ವೈವಿಧ್ಯಮಯ ಸದ್ಭಾವ ಚಿಗುರು ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ವ. ಉಮೇಶ್ ಕಾರಂತ್ ಮಂಗಳೂರು, ಎಂ. ಪಿ ಅಬೂಬಕ್ಕರ್ ಮುರ, ಆನಂದ ರೈ ಅಡ್ಕಸ್ಥಳ, ಸತ್ಯಲತಾ ಸಿದ್ಧಮೂಲೆ ನ್ಯಾನ್ಸಿ ನೆಲ್ಯಾಡಿ ಅಲ್ಲದೇ ಪುಟಾಣಿ ತಶ್ವಿ ಶಾಂಭವಿ ಕವನ ವಾಚಿಸಿದರು. ಚಿಗುರೆಲೆ ಸಾಹಿತ್ಯ ಬಳಗದಲ್ಲಿ ಸದಸ್ಯರಾಗಿದ್ದು 2025 ರಲ್ಲಿ ಕೃತಿ ಬಿಡುಗಡೆಗೊಳಿಸಿರುವ ಚಂದ್ರಹಾಸ ಕುಂಬಾರ ಬಂದಾರು (ತುಳು :ಉರುವೆ), ಜಯರಾಮ್ ಪಡ್ರೆ (ಕೃತಿ :ನಿವೇದನೆ), ಸತೀಶ್ ಬಿಳಿಯೂರು (ಕೃತಿ: ಭಾವದೆಲೆ ಮೇಲೆ ಇಬ್ಬನಿ), ಶ್ರೀಕಲಾ ಕಾರಂತ್‌ ಅಳಿಕೆ (ಕೃತಿ ಸೊಬಗ ಸೆಲೆ ), ಕಾವ್ಯಶ್ರೀ (ಕೃತಿ :ನನ್ನೊಳಗಿನ ನಾನು) ಅನನ್ಯ ಎಚ್ ಸುಬ್ರಹ್ಮಣ್ಯ (ಕೃತಿ :ಅಭಿಶಸ್ತಿ), ಶ್ರೀಶಾವಾಸವಿ ತುಳುನಾಡ್ (ಗೇನೋದ ಬುಲೆ), ಸುಲೋಚನಾ ಪಿ ಕೆ (ಮೂಗಿಯ ಮನದೊಳ್), ಶ್ಯಾಮಲಾ ಪ್ರಸಾದ್ ಪಿಲಿಗೂಡು (ಬೆಳ್ಳಿ ಕಾಲ್ಲೆಜ್ಜೆ ) ವರ್ಷದ ಸಾಹಿತ್ಯ ಸಾಧಕರು ಗೌರವ ಸಮರ್ಪಿಸಲಾಯಿತು.

ಪ್ರಕೃತಿ ಏಮಾಜೆ ಮತ್ತು ಲೇಖನ ಏಮಾಜೆ ಪ್ರಾರ್ಥಿಸಿದರು. ಆಶಾಮಯ್ಯ ಪುತ್ತೂರು ಸ್ವಾಗತಿಸಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಪ್ರೀತಾ ಚರಣ್ ಕಡಬ ವಂದಿಸಿದರು.

ಸಭಾ ಕಾರ್ಯಕ್ರಮವನ್ನು ಜಗದೀಶ್ ಬಾರಿಕೆ ಮತ್ತು ಕಾವ್ಯಶ್ರೀ ನಿರ್ವಹಿಸಿದರು. ಕವಿಗೋಷ್ಠಿ ನಿರೂಪಣೆಯನ್ನು ವೀಣಾ ಜಗದೀಶ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ಕವಿತಾ ಸತೀಶ್‌ ಮತ್ತು ಮಂಜುಶ್ರೀ ನಲ್ಕನಿರ್ವಹಿಸಿದರು. ಆಶಾ ಅಡೂರ್, ಗಿರೀಶ್ ಕೊಯಿಲ, ವಿಂಧ್ಯಾ ಎಸ್ ರೈ ಕಡೇಶಿವಾಲಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪೂರ್ಣಿಮಾ ಸಾಲೆತ್ತೂರು, ಮೋಹಿತಾ ಹೊಸ್ಮಠ, ಸುಪ್ರಿತಾ ಚರಣ್ ಪಾಲಪ್ಪೆ,ಅಕ್ಷತಾ ನಾಗನಕಜೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ಅಶ್ವಿಜ ಶ್ರೀಧರ್ ಬೆಳ್ತಂಗಡಿ

LEAVE A REPLY

Please enter your comment!
Please enter your name here