ಶಿಕ್ಷಕರ ವೃತ್ತಿ ಪವಿತ್ರವಾದುದು.ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ರೂವಾರಿಗಳು ಶಿಕ್ಷಕರು .ನಿಮ್ಮನ್ನು ವೃತ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ವಿದ್ಯಾಭಾರತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿರಿ. ಶಿಕ್ಷಕರು ಸಮಾಜದ ಆಸ್ತಿಯಾಗಬೇಕು ವಿದ್ಯಾಭಾರತಿ ಕರ್ನಾಟಕದ ಆಶಯವೇ ಇದಾಗಿದೆ ಎಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರು ಗುರುದಾಸ ಶೆಣೈ ಹೆಬ್ರಿ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸುವ ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ,ಗಣಿತ ವೇದಗಣಿತ ,ಯೋಗ ,ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆ ಸಂಬಂಧಿತ ಪೂರ್ವ ಸಿದ್ಧತಾ ಬೈಠಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ.ಆರ್.ಎನ್ ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ,ಗಣಿತ ವೇದಗಣಿತ ,ಯೋಗ ,ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆ ಸಂಬಂಧಿತ ಪೂರ್ವ ಸಿದ್ಧತಾ ಬೈಠಕ್
ನಡೆಯಿತು.
ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷರು ಪಾಂಡುರಂಗ ಪೈ ಸಿದ್ಧಾಪುರ , ಅಮೃತ ಭಾರತಿ ಟ್ರಸ್ಟ್ ನ ಸದಸ್ಯರು ಶೈಲೇಶ್ ಕಿಣಿ ಹೆಬ್ರಿ , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್ ವಿಜಯ ಕುಮಾರ ಶೆಟ್ಟಿ , ಜಿಲ್ಲಾ ಗಣಿತ ಪ್ರಮುಖ್ ಶ್ರೀಮತಿ ಜ್ಯೋತಿ ಸಿದ್ಧಾಪುರ,ಅಮೃತ ಭಾರತಿ ವಿದ್ಯಾಲಯ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣಾ ಆಚಾರ್ , ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲರು ಅರುಣ್ ಕುಮಾರ್ ಎಚ್ . ವೈ. ಉಪಸ್ಥಿತರಿದ್ದರು. ಬೈಠಕ್ ನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೇರ್ಕಾಡಿಯ ವಿಜ್ಞಾನ ಮಾತಾಜಿ ಶ್ರೀಮತಿ ಪ್ರಶ್ಮಿತಾ ಬ್ರಹ್ಮಾವರ
ಜಿಲ್ಲಾ ವಿಜ್ಞಾನ ಪ್ರಮುಖ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು .
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಯಾಗಿದ್ದು ಸಂಬಂಧಿಸಿದ ಸಂಸ್ಥೆಯ 32 ಗಣಿತ ,ವಿಜ್ಞಾನ ಮಾತಾಜಿ ಗುರೂಜಿಯವರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಜ್ಞಾನ ,ಗಣಿತ , ವೇದಗಣಿತ , ಸಂಸ್ಕೃತಿ ಜ್ಞಾನ ಮಹೋತ್ಸವ ಶಿಶುವರ್ಗ ಮತ್ತು ಬಾಲವರ್ಗ ಸ್ಪರ್ಧೆಯು ಆಗಸ್ಟ್ 10 ಪಿ.ಆರ್.ಎನ್ .ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ , ಜಿಲ್ಲಾ ಮಟ್ಟದ ಕಿಶೋರ್ ವರ್ಗದ ಸ್ಪರ್ಧೆಯು ಆಗಸ್ಟ್ 19 ಸೂರ್ಯ ಚೈತನ್ಯ ಗ್ಲೋಬಲ್ ಆಕಾಡೆಮಿ ಸ್ಕೂಲ್ ಕುತ್ಯಾರಿನಲ್ಲಿ ನಡೆಯುವುದು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ವಿಜ್ಞಾನ, ಗಣಿತ, ವೇದಗಣಿತ ಮೇಳದ ಮಾಹಿತಿಯನ್ನು ,ಜಿಲ್ಲಾ ಸಂಸ್ಕೃತಿ ಜ್ಞಾನ ಪ್ರಮುಖ್ ಕುಮಾರಿ ಜ್ಯೋತಿ ಎಳ್ಳಾರೆ ಸಂಸ್ಕೃತಿ ಜ್ಞಾನ ಮಹೋತ್ಸವ ಸಂಬಂಧಿತ ಮಾಹಿತಿಯನ್ನು ನೀಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಬೈಠಕ್ ನಿರ್ವಹಿಸಿದರು.

