ತಮಿಳುನಾಡಿನ ಪ್ರಸಿದ್ಧ “ಈಶಾ ಫೌಂಡೇಶನ್ ಆವರಣದಲ್ಲಿರುವ ಭವ್ಯ “ಆದಿಯೋಗಿ ಶಿವ ಪ್ರತಿಮೆ” ಬಳಿ ತುಳು ಧ್ವಜ ಹಾರಿಸುವ ಮೂಲಕ ಅಜಯ್ ನೀರ್ ಮಾರ್ಗ ಅವರು ತುಳುನಾಡಿನ ಹೆಮ್ಮೆಯನ್ನು ದೇಶದ ಮಟ್ಟದಲ್ಲಿ ಮೆರೆದಿದ್ದಾರೆ.

ಸುಮಾರು 1000 ಕಿ.ಮೀ.ಗಳಷ್ಟು ದೂರ ಬೈಕ್‌ನಲ್ಲಿ ಪ್ರಯಾಣಿಸಿದ ಅಜಯ್ ನೀರ್ ಮಾರ್ಗ, ತುಳು ಭಾಷೆ ಮತ್ತು ತುಳುನಾಡಿನ ಸಂಸ್ಕೃತಿಯ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ವಿಶಿಷ್ಟವಾಗಿ ಪ್ರದರ್ಶಿಸಿದರು. ದೂರದ ಪ್ರದೇಶಗಳಲ್ಲಿಯೂ ತುಳುವಿನ ಗುರುತನ್ನು ಪರಿಚಯಿಸುವ ಉದ್ದೇಶದಿಂದ ಕೈಗೊಂಡ ಈ ಸಾಹಸಯಾನ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಾಹಸಯಾನದಲ್ಲಿ ತಂಡದ ಸದಸ್ಯರು ತುಳು ಧ್ವಜವನ್ನು ವಿವಿಧ ಪ್ರಮುಖ ಸ್ಥಳಗಳಲ್ಲಿ ಹಾರಿಸಿ, ತುಳುನಾಡಿನ ಸಾಂಸ್ಕೃತಿಕ ಗುರುತನ್ನು ಪರಿಚಯಿಸಿದರು. ವಿಶೇಷವಾಗಿ ಕಾವೇರಿ ನದಿಯ ಉಗಮ ಸ್ಥಳದಲ್ಲಿಯೂ ಅಜಯ್ ನೀರ್ ಮಾರ್ಗ ಅವರು ತುಳು ಧ್ವಜವನ್ನು ಮುನ್ನಡೆಸಿ ಗಮನ ಸೆಳೆದರು.
ತುಳು ಭಾಷೆ, ಸಂಸ್ಕೃತಿ ಮತ್ತು ದೈವ ಪರಂಪರೆಯ ಉಳಿವಿಗಾಗಿ ಯುವಕರು ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಯುವಕರಲ್ಲಿ ಭಾಷಾಭಿಮಾನ ಮತ್ತು ಸಂಸ್ಕೃತಿ ಉಳಿವಿನ ಜಾಗೃತಿ ಮೂಡಿಸುವ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.

