ದೇವಸ್ಥಾನದ ಕಾಣಿಕೆ ಹುಂಡಿ ಕಳವು : ಆರೋಪಿ ಬಂಧನ

0
87

ಉಡುಪಿ : ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣವನ್ನು ಅಜೆಕಾರು ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವರಂಗ ಗ್ರಾಮದ ಮಂಜಕ್ಯಾರು ನಿವಾಸಿ ರಾಘವೇಂದ್ರ ವಿ.ಕೆ (35) ಎಂದು ಗುರುತಿಸಲಾಗಿದೆ. ಈತನಿಂದ ಕಳವುಗೈದ 1,000 ರೂ. ನಗದು ಹಣ, ಸುಮಾರು 25,000 ರೂ. ಮೌಲ್ಯದ ಬೈಕ್, 5,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ಸ್ಪ್ಯಾನರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ಕುರಿತು, ದೇವಸ್ಥಾನದ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿ ತ್ತಾಯ ಹಾಗೂ ನಾಗದೇವರ ಕಾಣಿಕೆ ಹುಂಡಿಗಳ ಬೀಗವನ್ನು ಮುರಿದು, ಅವುಗಳಲ್ಲಿ ಇದ್ದ ಕಾಣಿಕೆ ಹಣವನ್ನು ಕಳವು ಮಾಡಲಾಗಿದೆ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here