ಒಂದು ಜನಾಂಗದ ಜೊತೆಯಲ್ಲಿ ಸುಖವಾಗಿ ಜೊತೆಯಲ್ಲಿ ಇರಲು ಅಲ್ಲಿನ ಸಾಂಪ್ರದಾಯಿಕ ಪದ್ದತಿ ಮತ್ತು ತಿನಿಸುಗಳು ಸಂಭ್ರಮಿಸುವ ಅಗತ್ಯ ಬಹಳ ಇದೆ ಎಂದು ಬಹು ಭಾಷಾ ಸಾಹಿತಿ,ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಕರ್ನಾಟಕ ಶಿವ ಸೇವಾ ಸಮಿತಿ(ರಿ.), ಪಾಂಡೇಶ್ವರ ಇಲ್ಲಿನ ಯುವಜನ ವೃಂದದವರು ಆಚರಿಸಿದ ಆಟಿದ ಕೂಟವನ್ನು ಪಿಂಗಾರ ಅರಳಿಸಿ,ದೀಪ ಬೆಳಗಿಸಿ ಮಾತನಾಡಿದರು.
ಗೆಡ್ಡೆ ಗೆಣಸು, ಕಾಡಿನಲ್ಲಿ ದೊರಕುವ ಸೊಪ್ಪುಗಳು ಸೂರ್ಯನ ಬೆಳಕು ಸೇರಿದಂತೆ ಇತರ ಪೋಶಕಾಂಶಗಳಿಂದ ಶ್ರೀಮಂತ ಇರುತ್ತದೆ. ಮನುಷ್ಯನ ಆರೋಗ್ಯಕ್ಕೆ ಆಟಿಯ ತಿಂಗಳಲ್ಲಿ ಇದೆಲ್ಲಾ ಬಹಳ ಪೂರಕ ಔಷಧ ಎಂದು ಹಿರಿಯರು ಕಂಡುಕೊಂಡರು ಎಂಬುದಾಗಿ ಹಿತನುಡಿದರು.
ಶ್ರೀ ಭ್ರಮರಾಂಭ ಧರ್ಮ ಚಾವಡಿ ತಡ್ಯ ಇದರ ಮೊಕ್ತೇಸರ ಪ್ರಾಣೇಶ್ ಮುಖ್ಯ ಅತಿಥಿ ಆಗಿ ಮಾತನಾಡಿ ನಮ್ಮ ಇಂದಿನ ಮಕ್ಕಳು ಮತ್ತು ಆಸಕ್ತ ಹಿರಿಯರು ಆದಷ್ಟು ಶಿಕ್ಷಣದ ಲಾಭ ಪಡೆದು ದೇಶ,ವಿದೇಶದ ಮಾಹಿತಿಯನ್ನು ಜ್ನಾನವಾಗಿ ಪಡೆಯಬೇಕು ಎಂದು ಶುಭಾಶಯ ಕೋರಿದರು.
ಸಮಿತಿಯ ಗೌರವ ಅಧ್ಯಕ್ಷ ಕಾಂತಪ್ಪ ಬಂಗೇರ ಬಿ ಮಾತನಾಡಿ 1928ರಲ್ಲಿ ಆರಂಭವಾದ ಸಮಿತಿಯು ಶತಮಾನದ ಹೊಸ್ತಿಲಲ್ಲಿ ಇದೆ ಎಂದರು. ನಾದ ಸಂಕೀರ್ತನ ಮಂಗಳೂರು ಇದರ ಅಧ್ಯಕ್ಷ ಸುಜಿತ್ ಶೆಟ್ಟಿ ವೇದಿಕೆಯಲ್ಲಿ ಇದ್ದರು. ಪಾರ್ವತಿ ಅವರು ಸ್ವಾಗತಿಸಿ ನಿರೂಪಿಸಿದರು.ರಾಮದಾಸ್ ಪಾಂಡೇಶ್ವರ ವಂದಿಸಿದರು.

