Saturday, May 11, 2024
Homeಆರ್ಥಿಕಮನೆ ಬಾಗಿಲಿಗೆ ಈ ಆಸ್ತಿ ಸೇವೆ ಮಹಾನಗರ ಪಾಲಿಕೆ ವತಿಯಿಂದ ಈ ಆಸ್ತಿ ವಿತರಣಾ ಆಂದೋಲನ

ಮನೆ ಬಾಗಿಲಿಗೆ ಈ ಆಸ್ತಿ ಸೇವೆ ಮಹಾನಗರ ಪಾಲಿಕೆ ವತಿಯಿಂದ ಈ ಆಸ್ತಿ ವಿತರಣಾ ಆಂದೋಲನ


ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ವತಿಯಿಂದ ದಾವಣಗೆರೆ ನಗರದ ಎಲ್ಲಾ ಆಸ್ತಿ ಖಾತೆದಾರರಿಗೆ ಮನೆ ಬಾಗಿಲಿಗೆ ಈ ಆಸ್ತಿ ಆಂದೋಲನವನ್ನು ಹಮ್ಮಿಕೊಂಡಿದ್ದು ನಗರದ ಎಸ್.ನಿಜಲಿಂಗಪ್ಪ ಬಡಾವಣೆ, ಎಸ್.ಎಸ್.ಬಡಾವಣೆ ಹಾಗೂ ಸುತ್ತಮುತ್ತಲು ಇರುವ ಬಡಾವಣೆಗಳಲ್ಲಿ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಈ ಆಸ್ತಿ ಪಡೆದ ಸಾರ್ವಜನಿಕರ ವತಿಯಿಂದ ಸಮಾಜ ಸೇವಕರು, ಹಿರಿಯ ಇಂಜಿನಿಯರ್‌ರಾದ ಹೆಚ್.ವಿ.ಮಂಜುನಾಥ್ ಸ್ವಾಮಿಯವರು ಮಾತನಾಡಿ, ಯಾವುದೇ ಆಸ್ತಿ ಮಾರಲು, ಆಸ್ತಿ ಕೊಳ್ಳಲು ಹಾಗೂ ಆಸ್ತಿ ಮೇಲೆ ಸಾಲ ಪಡೆಯಲು ಈ ಸ್ವತ್ತಿನ ಅವಶ್ಯಕತೆ ಕಡ್ಡಾಯವಾಗಿದೆ. ಇಂಥ ಸಂದರ್ಭದಲ್ಲಿ ಮನೆ ಬಾಗಿಲಿಗೆ ಈ ಆಸ್ತಿ ಆಂದೋಲನ ಕಾರ್ಯಕ್ರಮ ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ವಲಯ ಕಚೇರಿ-೩ ವಲಯ ಆಯುಕ್ತರಾದ ನಾಗರಾಜ ಕೆ ಮಾತನಾಡಿ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿ ಸಾರ್ವಜನಿಕವಾಗಿ ವಿಳಂಬವಾಗದೆ ತ್ವರಿತವಾಗಿ ಆನ್‌ಲೈನ್ ಮುಖಾಂತರ ಸರಳೀಕರಣ ಮಾಡಿಕೊಡಲು ಈ ಸ್ವತ್ತು ಕೊಡಲಾಗುತ್ತೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಕಂದಾಯ ಅಧಿಕಾರಿ ಶ್ರೀಕೃಷ್ಣ, ಕಂದಾಯ ಅಧಿಕಾರಿ ಶ್ರೀಮತಿ ಈರಮ್ಮ, ಕಂದಾಯ ಇಲಾಖೆಯ ಮಂಜುನಾಥ್ ಕಲಾಲ್, ಶಶಿಧರ್, ವಸಂತ್, ಸುರೇಶ್, ರಿಯಲ್ ಎಸ್ಟೇಟ್ ಏಕಾಂತಪ್ಪ ಮತ್ತು ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular