ಉಜಿರೆ : ಧರ್ಮಸ್ಥಳದಲ್ಲಿ ಏ. ೧೩ ರಿಂದ ೨೩ ರ ವರೆಗೆ ಕಾಲಾವಧಿ ಜಾತ್ರೆ ನಡೆಯುತ್ತಿದ್ದು, ಸಂಪ್ರದಾಯದಂತೆ ಏ. 12 ರಂದು ಭಾನುವಾರ ಮಾಯಿನಡಾವಳಿ ನಿಮಿತ್ತ ಹಾಗೂ ಏ. 15 ರಂದು ಬುಧವಾರ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಪಡಿಕಾಳು ವಿತರಿಸಲಾಯಿತು.
ಏ. 12 ಭಾನುವಾರ ಮಾಯಿನಡಾವಳಿ , ಬೆಳ್ತಿಗೆ ಅಕ್ಕಿ : 5,740 ಕೆ.ಜಿ., ತೆಂಗಿನ ಎಣ್ಣೆ: 1148 ಲೀ, ಮೆಣಸು: 460 ಕೆ.ಜಿ., ಉಪ್ಪು: 1148 ಕೆ.ಜಿ., ಪಡಿಕಾಳು: 1148 ಕೆ.ಜಿ.
ಏ. 15, ಬುಧವಾರ :ಜಾತ್ರೆ: ಬೆಳ್ತಿಗೆ ಅಕ್ಕಿ : 10,242 ಕೆ.ಜಿ., ತೆಂಗಿನ ಎಣ್ಣೆ: 2048 ಲೀ, ಮೆಣಸು: 820ಕೆ.ಜಿ., ಉಪ್ಪು: 2048 ಕೆ.ಜಿ., ಪಡಿಕಾಳು: 2048 ಕೆ.ಜಿ.
ಕಾಲಾವಧಿ ಜಾತ್ರೆ ಪ್ರಯುಕ್ತ ಏ19 ಭಾನುವಾರ ಕೆರೆಕಟ್ಟೆ ಉತ್ಸವ. ಏ. 20 ಸೋಮವಾರ ರಾತ್ರಿ: ಗೌರಿಮಾರು ಕಟ್ಟೆ ಉತ್ಸವ. ಏ. 21: ಮಂಗಳವಾರ ರಾತ್ರಿ ಬ್ರಹ್ಮರಥೋತ್ಸವ.
ಏ. 22 ರಂದು ಬುಧವಾರ ರಾತ್ರಿ ಧ್ವಜ ಅವರೋಹಣದೊಂದಿಗೆ ಕಾಲಾವಧಿ ಜಾತ್ರೆ ಸಮಾಪನಗೊಳ್ಳುತ್ತದೆ.
