ಕುಲಾಲ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ಮಾಜಿ ಅಧ್ಯಕ್ಷರು, ಹಾಲಿ ಸಮಿತಿಯ ಗೌರವ ಅಧ್ಯಕ್ಷರು ನಿವೃತ್ತ ತಹಸೀಲ್ದಾರ್ ಆದ ಬಿ ಎಸ್ ಕುಲಾಲ್ ಇವರು ದಿನಾಂಕ 30.08.2026ರಂದು ಶಿವೈಕ್ಯರಾಗಿದ್ದು, ಇವರಿಗೆ ಕುಲಾಲ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ವತಿಯಿಂದ ನುಡಿ ತರ್ಪಣ ಕಾರ್ಯಕ್ರಮ ಸಂಘದ ಕಚೇರಿ ಕುಲಾಲ ಭವನ ಪುತ್ತೂರು ಇಲ್ಲಿ ನಡೆಯಿತು.
ನುಡಿತರ್ಪಣ ಕಾರ್ಯಕ್ರಮದಲ್ಲಿ ಕೃಷ್ಣ ಕುಲಾಲ್ ಅಳಿಕೆ ಇವರು ಮಾತನಾಡಿ ಹಿರಿಯರಾದ ಬಿ ಎಸ್ ಕುಲಾಲರು ಕುಲಾಲ ಸಮಾಜ ಮಾತ್ರವಲ್ಲದೆ ಸರ್ವ ಸಮಾಜಕ್ಕೂ ಒಳಿತನ್ನು ಬಯಸಿದ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಸಮಾಜದ ಪ್ರತಿ ಓರ್ವರಿಗೂ ಸತ್ಪತ ತೋರಿದ ಹಿರಿಯ ಚೇತನ. ಇವರ ಹಾದಿಯಲ್ಲಿ ನಾವು ನಡೆದಾಗ ಅವರಿಗೆ ನಿಜವಾದ ಗೌರವ ತೋರಿದಂತೆ ಎಂದರು.
ಕುಲಾಲ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ಮಾಜಿ ಅಧ್ಯಕ್ಷರು ಹಾಗೂ ನಿವೃತ್ತ ಅರಣ್ಯಧಿಕಾರಿ ಕೃಷ್ಣಪ್ಪ ಕೆ ಇವರು ಮಾತನಾಡಿ ಬಿ ಎಸ್ ಕುಲಾಲರು ಪುತ್ತೂರು ಕುಲಾಲ ಸಂಘದ ಕಟ್ಟಡ ಹಾಗೂ ಕುಂಬಾರರ ಗುಡಿ ಕೈಗಾರಿಕೆ ಸಂಘ ಪುತ್ತೂರು ಇದರ ಕಟ್ಟಡ ನಿರ್ಮಾಣ ಮಾಡುವಲ್ಲಿ ಹಾಗೂ ಸಮಾಜದ ಏಳಿಗೆಗಾಗಿ ನಿಷ್ಕಲ್ಮಶ ಮನಸ್ಸಿನಿಂದ ದುಡಿದ ಹಿರಿಯ ಚೇತನ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಾಲ ಸಂಘ ಪುತ್ತೂರು ಇದರ ಮಾಜಿ ಅಧ್ಯಕ್ಷರಾದ ಶಿವಪ್ಪ ಮೂಲ್ಯ ಸಂಪ್ಯ, ನಿಕಟಪೂರ್ವ ಅಧ್ಯಕ್ಷರುಗಳಾದ ನವೀನ್ ಕುಲಾಲ್ ಪುತ್ತೂರು, ಮಾಜಿ ಅಧ್ಯಕ್ಷರಾದ ಡಾ || ಚಂದ್ರಶೇಖರ ಕೆ, ಜನಾರ್ಧನ ಬಂಗೇರ ಸಿಟಿಗುಡ್ಡೆ, ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶುಭಲತಾ ಹಾರಾಡಿ ನುಡಿ ತರ್ಪಣ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಎಮ್ ಶೇಷಪ್ಪ ಕುಲಾಲ್ ಇವರು ಮಾತನಾಡಿ ಬಿ ಎಸ್ ಕುಲಾಲ್ ಇವರು ಪ್ರಸ್ತುತ ಸಮಿತಿಯ ಗೌರವ ಅಧ್ಯಕ್ಷರಾಗಿ ನಮಗೆ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡುತ್ತಾ ಸಂಘವನ್ನು ಮುನ್ನಡೆಸುವಲ್ಲಿ ಅವರ ನಿರಂತರ ಸಹಕಾರವನ್ನು ಸ್ಮರಿಸಿದರು.
ವೇದಿಕೆಯಲ್ಲಿ ಬಿ ಎಸ್ ಕುಲಾಲ್ ಇವರ ಕಿರಿಯ ಪುತ್ರರಾದ ಗೋಕುಲ್ ದಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಸುಧಾಕರ್ ಕುಲಾಲ್ ನಡುವಾಲ್, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಾನಂದ ಸಿ ಎಷಚ್, ವಸಂತ್ ಅಕಾಯಿ, ವಸಂತ ಕುಲಾಲ್ ಕಾರೆಕಾಡ್, ಕೃಷ್ಣ ಕುಲಾಲ್ ಮಚ್ಚಿಮಲೆ, ಕುಲಾಲ ಸಂಘ ಪುತ್ತೂರು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ರತ್ನಾ ಕೃಷ್ಣಪ್ಪ ಕೆ, ಸಂಘದ ಮಾಜಿ ಕೋಶಾಧಿಕಾರಿ ಚಿತ್ರಲೇಖ ಬಲ್ನಾಡ್, ಸೇಡಿಯಾಪು ಗ್ರಾಮ ಸಮಿತಿಯ ಕಾರ್ಯದರ್ಶಿ ಪೂರ್ಣಿಮಾ ಸಂತೋಷ್, ಯಶವಂತ ಪಿ ವಿ ಉರ್ಲಾಂಡಿ, ವೆಂಕಪ್ಪ ಕುಲಾಲ್ ಕಾವು,ರುಕ್ಮಯ್ಯ ಕುಲಾಲ್ ಬಲ್ನಾಡ್, ಬಾಬು ಮೂಲ್ಯ ಗೆಣಸಿನಕುಮೇರು, ನಾಗರಾಜ್ ಸಿಟಿಗುಡ್ಡೆ, ಅನಿತಾ ಕೊಡಿಮರ,ರೇಷ್ಮಾ ಕಾರೆಕಾಡ್, ಸಹನಾ ಮಚ್ಚಿಮಲೆ ಹಾಗೂ ಬಿ ಎಸ್ ಕುಲಾಲ್ ಇವರ ಕುಟುಂಬಸ್ಥರು ಮತ್ತು ಸಮಾಜದ ಭಾಂದವರು ಉಪಸ್ಥಿತರಿದ್ದರು. ಬಿ ಎಸ್ ಕುಲಾಲ್ ಇವರ ಭಾವಚಿತ್ರಕ್ಕೆ ಪುಸ್ಪಾರ್ಚನೆ ಮಾಡಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶ್ವನಾಥ ಕುಲಾಲ್ ಮಿತ್ತೂರು ಇವರು ಅಕ್ಷರಾಂಜಲಿ ಸಲ್ಲಿಸಿದರು. ಕುಲಾಲ ಸಂಘ ಪುತ್ತೂರು ಇದರ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಎನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಸಹಕರಿಸಿದರು.

